ಬೇಕಾಗುವ ಪದಾರ್ಥಗಳು:
ಎಳನೀರು
ಎಳನೀರಿನ ಗಂಜಿ
ಹಾಲು
ಕಂಡೆನ್ಸ್ಡ್ ಮಿಲ್ಕ್
ಏಲಕ್ಕಿ ಪುಡಿ
ಗೋಡಂಬಿ, ದ್ರಾಕ್ಷಿ & ತುಪ್ಪ
ಮಾಡುವ ವಿಧಾನ?
ಅರ್ಧ ಕಪ್ ಎಳನೀರಿನ ಗಂಜಿಯನ್ನು ಮಿಕ್ಸಿ ಜಾರ್ಗೆ ಹಾಕಿ, ಸ್ವಲ್ಪ ಎಳನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ಉಳಿದ ಗಂಜಿಯನ್ನು ಚಿಕ್ಕದಾಗಿ ಹೆಚ್ಚಿ ಪಕ್ಕಕ್ಕಿಡಿ. ಪಾತ್ರೆಯಲ್ಲಿ ಹಾಲು ಹಾಕಿ ಸಣ್ಣ ಉರಿಯಲ್ಲಿ ಹಾಲು ಅರ್ಧದಷ್ಟು ಗಟ್ಟಿಯಾಗುವವರೆಗೆ ಕುದಿಸಿ. ನಂತರ ಕಂಡೆನ್ಸ್ಡ್ ಮಿಲ್ಕ್ ಮತ್ತು ಏಲಕ್ಕಿ ಪುಡಿ ಸೇರಿಸಿ ತಣ್ಣಗಾಗಲು ಬಿಡಿ. ಹಾಲು ಪೂರ್ತಿ ತಣ್ಣಗಾದ ಮೇಲೆ, ರುಬ್ಬಿದ ಗಂಜಿ ಪೇಸ್ಟ್, ಹೆಚ್ಚಿದ ಗಂಜಿ ಚೂರುಗಳು ಮತ್ತು ಎಳನೀರು ಸೇರಿಸಿ ಚೆನ್ನಾಗಿ ಕಲಸಿ. ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿ ಹುರಿದು ಪಾಯಸಕ್ಕೆ ಸೇರಿಸಿ. ಇದನ್ನು 1 ಗಂಟೆ ಫ್ರಿಡ್ಜ್ನಲ್ಲಿಟ್ಟು, ತಣ್ಣಗಿದ್ದಾಗಲೇ ಸವಿಯಲು ನೀಡಿ. ಬಾಯಲ್ಲಿಟ್ಟರೆ ಕರಗುವ ಎಳನೀರು ಪಾಯಸ ಸಿದ್ಧ!



