September 30, 2026
Wednesday, September 30, 2026
spot_img

FOOD | ಈ ಬಿರು ಬೇಸಿಗೆಯಲ್ಲಿ ಆರೋಗ್ಯಕರವಾದ ಸೌತೆಕಾಯಿ ತಂಬುಳಿ ಮಾಡಿ ಸವಿಯಿರಿ

ಸೌತೆಕಾಯಿಯ ಸಣ್ಣ ಭಾಗವು ವೇಸ್ಟ್‌ ಅಲ್ಲ. ಅದರ ಸಿಪ್ಪೆ , ತಿರುಳು, ಎಲ್ಲದರಿಂದಲೂ ಅಡುಗೆ ಮಾಡಬಹುದು. ಅಷ್ಟೇ ಅಲ್ಲ, ಸೌತೆಕಾಯಿಯ ಬೀಜದಿಂದಲೂ ರುಚಿರುಚಿಯಾದ ಅಡುಗೆ ಮಾಡಬಹುದೆಂದರೆ ನೀವೂ ನಂಬುತ್ತಿರಾ? ಹೌದು, ಸೌತೆಕಾಯಿಯನ್ನು ಅಡುಗೆಗೆ ಬಳಸಿದ ನಂತರ ಅದರ ಬೀಜವನ್ನು ಸಂಗ್ರಹಿಸಿ ಆರೋಗ್ಯಕ್ಕೆ ಹಿತವಾದ ಹಾಗೂ ಬಾಯಿಗೂ ರುಚಿಯಾದ ತಂಬುಳಿಯನ್ನು ಮಾಡಬಹುದು

ಸೌತೆಕಾಯಿ ತಂಬುಳಿಗೆ ಬೇಕಾಗುವ ಸಾಮಾಗ್ರಿಗಳು
ಸೌತೆಕಾಯಿ
ಜೀರಿಗೆ
ತೆಂಗಿನ ತುರಿ
ಉಪ್ಪು
ಮಜ್ಜಿಗೆ
ಎಣ್ಣೆ
ಕೆಂಪು ಬ್ಯಾಡಗಿ ಮೆಣಸು

ಸೌತೆಕಾಯಿ ತಂಬುಳಿ ಮಾಡುವ ವಿಧಾನ
ಮೊದಲು ಸೌತೆಕಾಯಿಯನ್ನು ಶುದ್ಧಗೊಳಿಸಿಕೊಂಡು ನಂತರ ಅದಕ್ಕೆ ಕಾಲು ಚಮಚ ಜೀರಿಗೆ, ತೆಂಗಿನತುರಿ ಹಾಕಿ, ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಬೇಕಾಗುತ್ತದೆ. ನಂತರ ರುಬ್ಬಿದ ಮಿಶ್ರಣಕ್ಕೆ ಮಜ್ಜಿಗೆ ಮತ್ತು ಉಪ್ಪು ಸೇರಿಸಬೇಕು. ಬಳಿಕ ಕಾದ ಎಣ್ಣೆಗೆ ಸಾಸಿವೆ, ಜೀರಿಗೆ , ಬ್ಯಾಡಗಿ ಮೆಣಸು ಹಾಕಿ ಒಗ್ಗರಣೆ ಮಾಡಿ ತಂಬುಳಿಗೆ ಸೇರಿಸಿದರೆ ರುಚಿಕರವಾದ ತಂಬುಳಿ ಸಿದ್ಧವಾಗುತ್ತದೆ.

Must Read