Friday, July 1, 2022

Latest Posts

ಉತ್ತರ ಪ್ರದೇಶದಲ್ಲಿ ಮಸೀದಿಗಳಿಂದ ಅನಧಿಕೃತ ಧ್ವನಿವರ್ಧಕಗಳಿಗೆ ಗೇಟ್ ಪಾಸ್ ಕೊಟ್ಟ ಪೊಲೀಸರು: ಇಲ್ಲಿವರೆಗೆ ಎಷ್ಟು ತೆರವಾಗಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಉತ್ತರ ಪ್ರದೇಶದಲ್ಲಿ ಸುಮಾರು 54,000 ಅನಧಿಕೃತ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಭಾನುವಾರ ಹೇಳಿದ್ದಾರೆ.
ಇಲ್ಲಿವರೆಗೆ 53, 942 ಧ್ವನಿವರ್ಧಕಗಳನ್ನು ಮಸೀದಿಗಳಿಂದ ತೆರವುಗೊಳಿಸಲಾಗಿದ್ದು, 60,295 ಧ್ವನಿವರ್ಧಕಗಳ ಶಬ್ದವನ್ನು ಸರ್ಕಾರ ಅನುಮತಿ ನೀಡಿರುವಷ್ಟು ಮಿತಿಗೊಳಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲೂ ಈ ತೆರವು ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಗೃಹ ಇಲಾಖೆ ಹಿರಿಯ ಅಧಿಕಾರಿ ಖಚಿತಪಡಿಸಿದ್ದಾರೆ.
ಇನ್ನು ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗುತ್ತಿದೆ. ಅನಧಿಕೃತವಾಗಿ ಅಳವಡಿಸಲಾದ ಧ್ವನಿವರ್ಧಗಳನ್ನು ತೆರವುಗೊಳಿಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss