ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದಲ್ಲಿ ಸಂಭವಿಸಿದ ಮಾರಣಾಂತಿಕ ರೈಲು ಅಪಘಾತದ ನಂತರ ಕೋರಮಂಡಲ್ ಚಾಲಕ ಮತ್ತು ಗೂಡ್ಸ್ ರೈಲು ಸಿಬ್ಬಂದಿ ಜೀವಂತವಾಗಿದ್ದಾರೆ. ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದ ಗೂಡ್ಸ್ ರೈಲು ಸಿಬ್ಬಂದಿ ಶುಕ್ರವಾರ ಸಂಜೆ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲೋಕೋ ಪೈಲಟ್ ಹಜಾರಿ ಬೆಹೆರಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋರಮಂಡಲ್ ಎಕ್ಸ್‌ಪ್ರೆಸ್ ಚಾಲಕ ಪ್ರಜ್ಞೆ ಬಂದಿದೆ ಎಂದು ರೈಲ್ವೆ ಇಲಾಖೆ ದೃಢಪಡಿಸಿದೆ.
ರೈಲ್ವೆ ಮಂಡಳಿಯ ಕಾರ್ಯಾಚರಣೆಗಳು ಮತ್ತು ವ್ಯವಹಾರ ಅಭಿವೃದ್ಧಿಯ ಸದಸ್ಯರಾದ ಜಯ ವರ್ಮಾ ಸಿನ್ಹಾ ಅವರು ಕೋರಮಂಡಲ್ ಲೋಕೋ ಪೈಲೆಟ್‌ನೊಂದಿಗೆ ನಡೆಸಿದ ಸಂಭಾಷಣೆಯನ್ನು ನೆನಪಿಸಿಕೊಂಡರು. ಟಿಟಿಇ ಜಯವರ್ಮ ಅವರು ಹಿಂದಿನಿಂದ ಅಸಹಜವಾದ ಶಬ್ದವನ್ನು ಕೇಳಿದಾಗ ಸ್ವಲ್ಪ ವ್ಯತ್ಯಯವಾಗಿದೆ ಎಂದು ಭಾವಿಸಿದರು.
ಗೂಡ್ಸ್ ರೈಲು ನಿಂತಿದ್ದ ಲೂಪ್ ಲೈನ್‌ನಲ್ಲಿ ಕೋರಮಂಡಲ್ ಬಂದಿರುವುದಕ್ಕೆ ಸಿಗ್ನಲಿಂಗ್ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದರೊಂದಿಗೆ ರೈಲ್ವೆ ಮಂಡಳಿ ಕೋರಮಂಡಲ್ ಎಕ್ಸ್ ಪ್ರೆಸ್ ಚಾಲಕನಿಗೆ ಕ್ಲೀನ್ ಚಿಟ್ ನೀಡಿದೆ. ರೈಲು ವೇಗದ ಮಿತಿಯಲ್ಲಿದ್ದು, ಸಿಗ್ನಲ್ ಜಂಪ್ ಮಾಡಿಲ್ಲ ಎಂದು ರೈಲ್ವೆ ಮಂಡಳಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.