ರೈಲು ದುರಂತ ಪ್ರಕರಣ ನಿಷ್ಪಕ್ಷಪಾತ ತನಿಖೆ‌ ನಡೆಸಿ‌: ನಾಗರಾಜ ಹದ್ಲಿ

ಹೊಸದಿಗಂತ ವರದಿ ಬಾಗಲಕೋಟೆ :

ಒಡಿಶಾದ ಬಹನಾಗ ಬಜಾರ್ ನಿಲ್ದಾಣ ಸನಿಹ ಶುಕ್ರವಾರ ಸಂಭವಿಸಿದ ಶತಮಾನದ ಘೋರ ರೈಲ್ವೆ ದುರಂತದಿಂದಾಗಿ ದೇಶಾದ್ಯಂತ ಸೂತಕದ ಛಾಯೆ ಆವರಿಸಿದೆ. ಎಂದು ಕಾಂಗ್ರೆಸ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ನಾಗರಾಜ ಹದ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಸಂಭವಿಸಿರುವ ದುರಂತದಲ್ಲಿ 275 ಪ್ರಯಾಣಿಕರ ದುರ್ಮರಣ ಆಘಾತಕಾರಿಯಾಗಿದೆ. ಈ ಘಟನೆಗೆ ಎನು ಕಾರಣ ಎನ್ನುವುದು ತನಿಖೆಯ ನಂತರವೇ ಸತ್ಯ ಹೊರಬೀಳಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಹೊಸ ರೈಲಿಗೆ ಹಸಿರು ನಿಶಾನೆಗೆ ತೋರುತ್ತಿರುವ ಆಸಕ್ತಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಮನ ಹರಿಸುತ್ತಿಲ್ಲ.

ಒಡಿಶಾದಲ್ಲಿ ಸಂಭವಿಸಿದ ಭೀಕರ ತ್ರಿವಳಿ ರೈಲು ದುರಂತ ಲೋಪದ ಬಗ್ಗೆ ಕೆಳಹಂತದಿಂದ ಹಿಡಿದು ಮೇಲಿನ ಹಂತದವರೆಗೆ ಹೊಣೆಗಾರಿಕೆಯಿರುವ ಯಾರನ್ನು ಸರ್ಕಾರ ರಕ್ಷಿಸುವ ಕಾರ್ಯ ಮಾಡಬಾರದು. ನಿಷ್ಪಕ್ಷಪಾತ ತನಿಖೆ ನಡೆಯಲಿ, ತಾಂತ್ರಿಕ ದೋಷವೋ? ಮಾನವ ಹಸ್ತಕ್ಷೇಪವೋ? ಎಂಬುದರ ನಿಗೋಢತೆಯನ್ನು ಬಯಲಿಗೆಳೆಯಲ್ಲಿ ಎಂದು ಜಿಲ್ಲಾ ಕಾಂಗ್ರೆಸ ಪ್ರಚಾರ ಸಮಿತಿಯ ಅಧ್ಯಕ್ಷರಾದ ನಾಗರಾಜ ಹದ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!