ಐಪಿಎಲ್ ಅಂಗಳಕ್ಕೆ ಮತ್ತೆ ಲಗ್ಗೆ ಇಟ್ಟ ಕೊರೋನಾ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್​ರೌಂಡರ್​ಗೆ ಪಾಸಿಟಿವ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಈ ಬಾರಿಯ ಐಪಿಎಲ್ ಗೂ ಕೊರೋನಾ ವಕ್ಕರಿಸಿದೆ. ಡೆಲ್ಲಿ ಕ್ಯಾಪಿಟಲ್ಸ್​ ಫಿಜಿಯೋ ನಂತರ ವಿದೇಶಿ ಆಟಗಾರನೊಬ್ಬರಿಗೆ ಕೋವಿಡ್​ 19 ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ.
ಇದೀಗ ಪುಣೆಗೆ ಆಗಮಿಸುವ ಬದಲು ಆಟಗಾರರೆಲ್ಲರೂ ಮುಂಬೈನಲ್ಲೇ ಕ್ವಾರಂಟೈನ್ ಆಗಿದ್ದಾರೆಂದು ತಿಳಿದು ಬಂದಿದೆ.
ಏಪ್ರಿಲ್ 20ರಂದು ಡೆಲ್ಲಿ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಬೇಕಿತ್ತು. ಆದರೆ, ತಂಡದಲ್ಲಿರುವ ವಿದೇಶಿ ಆಟಗಾರನಿಗೆ ಸೋಂಕು ತಗುಲಿರುವುದುರಿಂದ ಇಡೀ ತಂಡ ಕ್ವಾರಂಟೈನ್ ಆಗಿದೆ. ಪಿಟಿಐ ಏಜೆನ್ಸಿಯ ಪ್ರಕಾರ ತಂಡದಲ್ಲಿರುವ ಆಸ್ಟ್ರೇಲಿಯಾದ ಆಲ್​ರೌಂಡರ್​​ರಲ್ಲಿ ಕೆಲವು ಕೋವಿಡ್ ಲಕ್ಷಣಗಳು ಕಂಡು ಬಂದಿದ್ದು, ​ ರ್ಯಾಪಿಡ್​ ಆ್ಯಂಟಿಜನ್​​ ಟೆಸ್ಟ್​​ನಲ್ಲಿ ಪಾಸಿಟಿವ್​ ವರದಿ ಬಂದಿದೆ.

ಡೆಲ್ಲಿ ತಂಡದಲ್ಲಿರುವ ಏಕೈಕ ಆಸೀಸ್ ಆಲ್​ರೌಂಡರ್​ ಎಂದರೆ ಮಿಚೆಲ್ ಮಾರ್ಷ್​ ಮಾತ್ರ. ಮಾರ್ಷ್​ ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡು ಬಂದು ಕಳೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಆಡಿದ್ದರು. ಇವರು ಈಗಾಗಲೇ ಕೋವಿಡ್​ 19ಗೆ ತುತ್ತಾಗಿರುವ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ತ್​ ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದರಿಂದ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ.

ಇನ್ನು ಕೋವಿಡ್ 19 ಸೋಂಕು ಏಕಾಏಕಿ ಬಂದಿದಿಯೇ ಅಥವಾ ಪ್ಯಾಟ್ರಿಕ್ ಫರ್ಹಾರ್ತ್​​ ನಂತಹ ಪ್ರತ್ಯೇಕ ಪ್ರಕರಣವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರೋಟೋಕಾಲ್ ಪ್ರಕಾರ ಆರ್‌ಟಿಪಿಸಿಆರ್ ಮಾಡಲಾಗುತ್ತಿದೆ. ಹಾಗಾಗಿ, ಇಂದಿನ ಪುಣೆ ಪ್ರಯಾಣವನ್ನು ರದ್ದು ಮಾಡಲಾಗಿದೆ ಎಂದು ಬಿಸಿಸಿಐ ಮೂಲ ಪಿಟಿಐಗೆ ತಿಳಿಸಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!