ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಏಕಾಏಕಿ ಏರಿಕೆಯಾಗಿವೆ. ಮುಂಬೈನಲ್ಲಿ ಕೊರೋನಾ ವಿಪರೀತವಾಗಿದ್ದು, ಪಾಸಿಟಿವಿಟಿ ರೇಟ್ ಶೇ.24.3ಕ್ಕೆ ಏರಿಕೆಯಾಗಿದೆ.
ಕಳೆದ ನಾಲ್ಕು ದಿನದಿಂದ ಸೋಂಕಿನ ಪ್ರಕರಣಗಳು ಕೊಂಚ ಕಡಿಮೆಯಾಗಿದ್ದು, ಮುಂಬೈ ಮಂದಿ ನಿರಾಳವಾಗಿದ್ದರು. ಆದರೆ ನಿನ್ನೆ ಒಂದೇ ದಿನದಲ್ಲಿ 12,420ಪ್ರಕರಣಗಳು ಪತ್ತೆಯಾಗಿದ್ದು, ಪರಿಸ್ಥಿತಿ ಕೈ ಮೀರಿದೆ.
ಮಂಗಳವಾರ ಶೇ.18.6ರಷ್ಟಿದ್ದ ಪಾಸಿಟಿವಿಟಿ ರೇಟ್ ಬುಧವಾರ ಏಕಾಏಕಿ 24.3ಕ್ಕೆ ಏರಿಕೆಯಾಗಿದೆ. ಸೋಮವಾರ ಕೊರೋನಾ ಸೋಂಕಿನಿಂದ 8 ಮಂದಿ ಮೃತಪಟ್ಟಿದ್ದರು. ಮಂಗಳವಾರ 22 ಮಂದಿ, ಬುಧವಾರ 32 ಮಂದಿ ಮೃತಪಟ್ಟಿದ್ದಾರೆ.