ಡೆಲ್ಲಿಗೆ ತಲೆನೋವು ತಂದ ಕೊರೋನಾ: ಮತ್ತೊಬ್ಬ ಆಟಗಾರನಿಗೆ ಪಾಸಿಟಿವ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈಗಾಗಲೇ ಡೆಲ್ಲಿ ತಂಡದ ಮಿಚೆಲ್ ಮಾರ್ಷ್​ ಕೋವಿಡ್​ ಸೋಂಕು ತಗುಲಿಆಸ್ಪತ್ರೆ ಸೇರಿದ್ದು, ಇದೀಗ ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಮತ್ತೊಬ್ಬ ವಿದೇಶಿ ಆಟಗಾರನಿಗೂ ಸೋಂಕು ತಗುಲಿದೆ .
ಬುಧವಾರ ಪಂಜಾಬ್​ ಕಿಂಗ್ಸ್ ವಿರುದ್ಧ ಪಂದ್ಯಕ್ಕೂ ಮುನ್ನ ಬಿಸಿಸಿಐ ನಡೆಸಿದ ಕೋವಿಡ್​ 19 ​ ಟೆಸ್ಟ್​​ನಲ್ಲಿ ನ್ಯೂಜಿಲ್ಯಾಂಡ್​ನ ವಿಕೆಟ್​ ಕೀಪರ್ ಬ್ಯಾಟರ್​ ಟಿಮ್ ಸೀಫರ್ಟ್​​ ಪಾಸಿಟಿವ್ ಬಂದಿದ್ದು, ಇದು ಡೆಲ್ಲಿ ಕ್ಯಾಂಪಟ್​ನಲ್ಲಿ ಕಂಡುಬಂದ 6ನೇ ಕೋವಿಡ್​ 19 ಪ್ರಕರಣವಾಗಿದೆ.
ಬ್ರಬೋರ್ನ್​ನಲ್ಲಿ ಇಂದು ಸಂಜೆ ಪಂದ್ಯ ನಡೆಯುವುದಕ್ಕೂ ಮುನ್ನ ಬಿಸಿಸಿಐ ಮತ್ತೊಂದು ಸುತ್ತಿನ ಪರೀಕ್ಷೆ ನಡೆಸಲಿದೆ ಎಂದು ತಿಳಿದುಬಂದಿದೆ.ಎಲ್ಲಾ ಆಟಗಾರರನ್ನು ತಮ್ಮ ರೂಮಿನಲ್ಲಿರಲು ತಿಳಿಸಲಾಗಿದ್ದು, ಆಟಗಾರರ ಕೊಠಡಿಗೆ ತೆರಳಿ ಪರೀಕ್ಷೆ ಮಾಡಲು ಬಿಸಿಸಿಐ ಯೋಜನೆ ರೂಪಿಸಿದೆ. ಈ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ಪಂಜಾಬ್​ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಐಪಿಎಲ್ ನಿಯಮಗಳ ಪ್ರಕಾರ ಕಡಿಮೆ ಅಂದರೂ 7 ಭಾರತೀಯ ಆಟಗಾರರು ಸೇರಿದಂತೆ ತಂಡದಲ್ಲಿ 12 ಆಟಗಾರು ಇದ್ದರೆ ಮಾತ್ರ ಪಂದ್ಯ ವೇಳಾಪಟ್ಟಿಯಂತೆ ನಡೆಯಲಿದೆ. ಒಂದು ವೇಳೆ 12 ಆಟಗಾರರ ತಂಡ ಮಾಡಲು ಸಾಧ್ಯವಾಗದಿದ್ದರೆ ಪಂದ್ಯವನ್ನು ಮುಂದೂಡಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!