ದೇಶದಲ್ಲಿ ಸಾವಿರದ ಗಡಿ ದಾಟಿದ ಕೊರೋನಾ JN.1 ವೈರಸ್: ಕರ್ನಾಟಕವೇ ಟಾಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾ ವೈರಸ್ ರೂಪಾಂತರಿ JN.1 ದೇಶಾದ್ಯಂತ ಹೆಚ್ಚಾಗುತ್ತಿದ್ದು, ಶುಕ್ರವಾರ 1 ಸಾವಿರದ ಗಡಿ ದಾಟಿದೆ.

ದೇಶದ 16 ರಾಜ್ಯಗಳಲ್ಲಿ ಇದುವರೆಗೆ 1013 ಜೆಎನ್.1 ಪ್ರಕರಣಗಳು ವರದಿಯಾಗಿದ್ದು, ಕರ್ನಾಟಕ 214 ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದೆ. 170 ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. ಕೇರಳ(154), ಆಂಧ್ರಪ್ರದೇಶ (189), ಗುಜರಾತ್ (76) ಮತ್ತು ಗೋವಾ (66) ನಂತರದ ಸ್ಥಾನದಲ್ಲಿವೆ.

ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ತಲಾ 32, ಛತ್ತೀಸ್ಗಢದಲ್ಲಿ 25, ತಮಿಳುನಾಡಿನಲ್ಲಿ 22, ದೆಹಲಿಯಲ್ಲಿ 16, ಉತ್ತರ ಪ್ರದೇಶದಲ್ಲಿ 6, ಹರಿಯಾಣದಲ್ಲಿ 5, ಒಡಿಶಾದಲ್ಲಿ 3, ಪಶ್ಚಿಮ ಬಂಗಾಳದಲ್ಲಿ 2 ಮತ್ತು ಉತ್ತರಾಖಂಡದಲ್ಲಿ 1 ಪ್ರಕರಣ ದಾಖಲಾಗಿದೆ.

ದೇಶದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮತ್ತು JN.1 ರೂಪಾಂತರಿ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ತಕ್ಷಣಕ್ಕೆ ಆತಂಕ ಪಡುವ ಅಗತ್ಯ ಇಲ್ಲ. ಸೋಂಕಿತರಲ್ಲಿ ಹೆಚ್ಚಿನವರು ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದು ಸೌಮ್ಯ ಅನಾರೋಗ್ಯವನ್ನು ಸೂಚಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!