ಹೊಸದಿಗಂತ ವರದಿ,ಕೊಪ್ಪಳ:
ಕೊರೋನಾ ಮತ್ತು ಒಮಿಕ್ರಾನ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ರದ್ದಾಗಿದೆ.
ಜಾತ್ರೆ ರದ್ದಾಗಿದ್ದರೂ ಸಂಪ್ರಾದಾಯ ಬದ್ಧವಾಗಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಸದ್ಯ ಗವಿಸಿದ್ದೇಶ್ವರ ಕರ್ತೃ ಗದ್ದುಗೆಯ ದರ್ಶನ ಪಡೆಯಲು ಭಕ್ತರಿಗೆ ಅವಕಾಶವಿದೆ. ಒಂದು ವೇಳೆ ಕರೊನಾ ಮತ್ತಷ್ಟು ಹೆಚ್ಚಾದರೆ ಶ್ರೀಮಠದ ಭಕ್ತರ ಪ್ರವೇಶಕ್ಕೂ ನಿರ್ಬಂಧ ಹೇರಲಾಗುವುದು ಎಂದು ಶ್ರೀಮಠ ತಿಳಿಸಿದೆ.