Sunday, October 1, 2023

Latest Posts

ಕೊರೋನಾ, ಒಮಿಕ್ರಾನ್ ಹೆಚ್ಚಳ: ಕೇರಳದಲ್ಲಿ ಶಾಲೆಗಳು ಬಂದ್

ಹೊಸದಿಗಂತ ವರದಿ,ಕಾಸರಗೋಡು:

ಕೋವಿಡ್ ಹಾಗೂ ಒಮಿಕ್ರಾನ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಒಂದರಿಂದ ಒಂಭತ್ತನೇ ತರಗತಿ ವರೆಗೆ ಶಾಲೆಗಳನ್ನು ಜ.21ರಿಂದ ಮುಚ್ಚಲು ರಾಜ್ಯ ಸರಕಾರವು ತೀರ್ಮಾನಿಸಿದೆ. ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ಜರಗಿದ ಕೊರೋನಾ ಅವಲೋಕನಾ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
1ರಿಂದ 9ನೇ ತರಗತಿ ತನಕ ಇನ್ನು ಮುಂದೆ ಸದ್ಯಕ್ಕೆ ಆನ್ ಲೈನ್ ತರಗತಿ ಮುಂದುವರಿಯಲಿದೆ. ಆದರೆ 10ರಿಂದ 12ನೇ ತರಗತಿ ವರೆಗೆ ಕೋವಿಡ್ ಮಾನದಂಡಗಳೊಂದಿಗೆ ಶಾಲಾ ತರಗತಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೆ ಕೇರಳದ 14 ಜಿಲ್ಲೆಗಳಲ್ಲೂ ಇನ್ನಷ್ಟು ಕಠಿಣ ನಿಯಂತ್ರಣಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.
ತಜ್ಞರ ಸಲಹೆಯಂತೆ ಶಾಲೆಗಳನ್ನು ಮುಚ್ಚುವ ತೀರ್ಮಾನಕ್ಕೆ ಬರಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಶಿಕ್ಷಣ ಖಾತೆ ಸಚಿವ ವಿ.ಶಿವನ್ ಕುಟ್ಟಿ , ಆರೋಗ್ಯ ಇಲಾಖೆ ಸಚಿವೆ ವೀಣಾ ಜೋರ್ಜ್ ಹಾಗೂ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!