ಚೀನಾದಲ್ಲಿ ಕೊರೋನಾ ಏರಿಕೆ: ಆದ್ರೆ ಭಾರತ ಭಯಪಡುವ ಅಗತ್ಯವಿಲ್ಲ ಎಂದ ಅದಾರ್ ಪೂನಾವಾಲಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ವಿದೇಶಗಳಲ್ಲಿ ಕೊರೋನಾ ಏರಿಕೆ ಕಂಡ ಹಿನ್ನೆಲ್ಲೆ ದೇಶದಲ್ಲೂ ಎಚ್ಚರಿಕೆ ವಹಿಸಲಾಗುತ್ತಿದ್ದು, ಆದ್ರೆ ಭಾರತದಲ್ಲಿ ವ್ಯಾಕ್ಸಿನೇಷನ್ ಕವರೇಜ್ ಅತ್ಯುತ್ತಮವಾಗಿರುವುದರಿಂದ ಭಯಪಡುವ ಅಗತ್ಯವಿಲ್ಲ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಸಿಇಒ ಅದಾರ್ ಪೂನಾವಾಲ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಚೀನಾದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ವರದಿಯು ಕಳವಳಕಾರಿಯಾಗಿದೆ. ಆದರೆ, ನಮ್ಮ ದೇಶದಲ್ಲಿ ಅತ್ಯುತ್ತಮ ವ್ಯಾಕ್ಸಿನೇಷನ್ ಕವರೇಜ್ ಮತ್ತು ಟ್ರ್ಯಾಕ್ ರೆಕಾರ್ಡ್ ಅನ್ನು ಗಮನಿಸಿದರೆ ನಾವು ಭಯಪಡುವ ಅಗತ್ಯವಿಲ್ಲ. ನಾವು ಭಾರತ ಸರ್ಕಾರ ಮತ್ತು ಆರೋಗ್ಯ ಸಚಿವಾಲಯವು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ನಂಬುವುದನ್ನು ಮತ್ತು ಅನುಸರಿಸುವುದನ್ನು ಮುಂದುವರಿಸಬೇಕು’ ಎಂದು ಹೇಳಿದ್ದಾರೆ.

ಈಗಾಗಲೇ ಕೇಂದ್ರ ಸರಕಾರ ಕೂಡ ಕೊರೋನಾ ಹೊಸ ರೂಪಾಂತರಗಳನ್ನು ಟ್ರ್ಯಾಕ್ ಮಾಡಲು ವೈರಾಣುವಿನ ವಂಶವಾಹಿಗಳ ಸಂರಚನೆಯ ವಿಶ್ಲೇಷಣೆಗಾಗಿ (ಜೀನೋಮ್ ಸೀಕ್ವೆ ನ್ಸಿಂಗ್ಗೆ) ಕ್ರಮವನ್ನು ಹೆಚ್ಚಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!