ಹೊಸದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ (ಫೆ.25) 14 ಮಂದಿಗೆ ಕೊರೋನಾ ಸೋಂಕು ದೃಢ ಪಟ್ಟಿರುವುದಾಗಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದೇ ವೇಳೆ 38 ಮಂದಿ ಶುಕ್ರವಾರ ಸೋಂಕು ಮುಕ್ತರಾಗಿದ್ದಾರೆ. ಈ ತನಕ ಜಿಲ್ಲೆಯಲ್ಲಿ 1,33,384 ಮಂದಿ ಕೋವಿಡ್ ಮುಕ್ತರಾಗಿದ್ದಾರೆ. ಶುಕ್ರವಾರ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,845 ಕೋವಿಡ್ ಸಾವು ಸಂಭವಿಸಿರುವುದಾಗಿ ಆರೋಗ್ಯ ಇಲಾಖೆ ಹೇಳಿದೆ.
ದಕ್ಷಿಣ ಕನ್ನಡದಲ್ಲಿ 147 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇ.0.38ಕ್ಕೆ ಇಳಿದಿದೆ.