ಹಾಂಕಾಂಗ್‌ನಲ್ಲಿ 2,000 ಇಲಿಗಳಿಗೂ ಕೊರೋನಾ: ಸಾಮೂಹಿಕವಾಗಿ ಕೊಲ್ಲಲು ಸರ್ಕಾರ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನುಷ್ಯರಿಗೆ ಬಾಧೆ ನೀಡಿ ತೃಪ್ತಿಯಾಗದ ಕೊರೋನಾ ಇದೀಗ ಪ್ರಾಣಿಗಳಿಗೂ ಹರಡುತ್ತಿದೆ.
ಹಾಂಕಾಂಗ್‌ನಲ್ಲಿ 2,000 ಇಲಿಗಳಿಗೆ ಕೊರೋನಾ ಸೋಂಕು ತಗುಲಿದೆ. ಇದೀಗ ಈ ಇಲಿಗಳನ್ನು ಕೊಲ್ಲಲು ಸರ್ಕಾರ ನಿರ್ಧರಿಸಿದೆ.
ಹಾಂಕಾಂಗ್‌ನಲ್ಲಿ ಇಲಿ ಹಾಗೂ ಅಳಿಲು ಮಾರಾಟ ನಿಷೇಧಿಸಿದ್ದು, ಇಲಿ ಸಾಕುವವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಇಲಿಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಬಂದ್ ಮಾಡಿಸಿ, ಸ್ಯಾನಿಟೈಸ್ ಮಾಡಿಸಲಾಗುತ್ತಿದೆ. ಸಿಬ್ಬಂದಿಯಿಂದಲೇ ಇಲಿಗಳಿಗೆ ಸೋಂಕು ಹರಡಿರಬಹುದು ಎಂದು ಶಂಕಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!