ಕೊರೋನಾ ನಡುವೆ ಕಾಣಿಸಿಕೊಂಡ ಮಂಗನ ಕಾಯಿಲೆ: ಸಿದ್ದಾಪುರದಲ್ಲಿ ವೃದ್ಧೆ ಬಲಿ, 8 ಸೋಂಕಿತರು ಪತ್ತೆ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿದಲ್ಲಿ ಮಂಗನ ಕಾಯಿಲೆಗೆ 85 ವರ್ಷದ ವೃದ್ಧೆ ಜಾನಕಿ ಹೆಗಡೆ ಬಲಿಯಾಗಿದ್ದಾರೆ.
ಒಂದು ವಾರದಲ್ಲಿ ಮಂಗನ ಕಾಯಿಲೆಯ 8 ಸೋಂಕಿತರು ಪತ್ತೆ‌ಯಾಗಿದ್ದಾರೆ. ‌ಸಿದ್ದಾಪುರ ತಾಲೂಕಿನ ಹಲಗೇರಿ, ಕೋಲ್ ಸಿರ್ಸಿ, ಕಾನಸೂರು, ಬೀಳಗಿ ಗ್ರಾಮದಲ್ಲಿ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ.
ಇನ್ನು ಒಂದೇ ವಾರದಲ್ಲಿ 8 ಸೋಂಕಿತರು ಪತ್ತೆಯಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಮಂಗನ ಕಾಯಿಲೆ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here