ಉದ್ಘಾಟನೆಗೊಂಡ ದೇಶೀಯ ಸಬ್‌ ಮರೀನ್ ಐಎನ್‌ಎಸ್‌ ವಾಘ್ಶೀರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಾಜೆಕ್ಟ್-‌75 ಅಡಿಯಲ್ಲಿ ದೇಶೀಯವಾಗಿನಿರ್ಮಾಣವಾಗಿರುವ ಐಎನ್‌ಎಸ್‌ ವಾಘ್ಶೀರ್‌ ಜಲಾಂತರ್ಗಾಮಿ ನೌಕೆಯನ್ನು ಇಂದು ಮುಂಬೈನಲ್ಲಿ ಉದ್ಘಾಟಿಸಲಾಯಿತು. ರಕ್ಷಣಾ ಕಾರ್ಯದರ್ಶಿ ಅಜಯ್‌ ಕುಮಾರ್‌ ಜಲಾಂತಾರ್ಗಾಮಿಯನ್ನು ಉದ್ಘಾಟಿಸಿದರು. ದೇಶೀಯವಾಗಿ ನಿರ್ಮಾಣವಗಿರುವ ಸ್ಕಾರ್ಪಿನ್‌ ದರ್ಜೆಯ 6 ನೇ ಸಬ್‌ ಮರೀನ್‌ ಇದಾಗಿದೆ.

ಈ ಕುರಿತು ಮಾತನಾಡಿದ ರಕ್ಷಣಾ ಕಾರ್ಯದರ್ಶಿ ಅಜಯ್‌ ಕುಮಾರ್‌ “ಭಾರತವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುತ್ತಿದೆ ಎಂಬುದಕ್ಕೆ ಐಎನ್‌ಎಸ್‌ ವಾಘ್ಶೀರ್‌ ಉತ್ತಮ ಉದಾಹರಣೆಯಾಗಿದೆ. ಪ್ರಸ್ತುತ ಸಮುದ್ರ ಪ್ರಯೋಗದ ನಂತರ ವಾಘ್ಶೀರ್‌ ನೌಕೆ ಕಾರ್ಯಾರಂಭ ಮಾಡಲಿದೆ” ಎಂದು ಹೇಳಿದರು.

ಪ್ರಾಜೆಕ್ಟ್-75 ರ ಅಡಿಯಲ್ಲಿ ಇಲ್ಲಿಯವರೆಗೆ ಒಟ್ಟೂ 6 ಸ್ಕಾರ್ಪೀನ್ ದರ್ಜೆಯ ಸಬ್-ಮರೀನ್‌ ಗಳನ್ನು ನಿರ್ಮಾಣ ಮಾಡಲಾಗಿದ್ದು
ಸ್ಕಾರ್ಪೀನ್ ವರ್ಗದಲ್ಲಿರುವ ಜಲಾಂತರ್ಗಾಮಿ ನೌಕೆಗಳು ಡೀಸೆಲ್-ಎಲೆಕ್ಟ್ರಿಕ್ ಪ್ರೊಪಲ್ಷನ್ ಸಿಸ್ಟಮ್‌ಗಳಿಂದ ಕಾರ್ಯನಿರ್ವಹಿಸುತ್ತವೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಇವು ಮೇಲ್ಮೈ ಹಡಗು ಯುದ್ಧ, ಜಲಾಂತರ್ಗಾಮಿ ಯುದ್ಧ, ಗುಪ್ತಚರ ಸಂಗ್ರಹಣೆ, ಮೈನ್‌ ಲೈಯಿಂಗ್‌, ಸರ್ವೇಲೆನ್ಸ್‌ ಮುಂತಾದ ಹಲವು ಕಾರ್ಯಗಳನ್ನು ನಿರ್ವಹಿಸಬಹುದಾದ ಸಾಮರ್ಥ್ಯವನ್ನು ಹೊಂದಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!