ಕೊರೋನಾ ಲಸಿಕೆ ಅಭಿಯಾನ: ಹರ್ ಘರ್ ದಸ್ತಕ್ 2.0 ಮತ್ತೆ ಪ್ರಾರಂಭ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೊರೋನಾ ಲಸಿಕೆಯನ್ನುಮತ್ತಷ್ಟು ತ್ವರಿತಗೊಳಿಸುವ ಪ್ರಯತ್ನದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಹರ್ ಘರ್ ದಸ್ತಕ್ 2.0 ಅನ್ನು ಮತ್ತೇ ಪ್ರಾರಂಭಿಸಿದೆ. ಈ ಯೋಜನೆಯನ್ನು ಮಿಷನ್ ಮೋಡ್ ನಲ್ಲಿ ಅಳವಡಿಸಲಾಗಿರುವುದರಿಂದ, ಎಲ್ಲ ಅರ್ಹ ಫಲಾನುಭವಿಗಳಿಗೆ ಲಸಿಕೆ ಹಾಕುವ ಮೂಲಕ ಸಂಪೂರ್ಣ ಕೋವಿಡ್ ಲಸಿಕೆ ಕವರೇಜ್‌ಗೆ ಇದು ಕಾರಣವಾಗಲಿದೆ.
ಈ ಕಾರ್ಯ ಜುಲೈ 31 ರವರೆಗೆ ಮುಂದುವರೆಯಲಿದೆ. ಹರ್ ಘರ್ ದಸ್ತಕ್ 2.0 ರ ಉದ್ದೇಶವು ಮನೆ – ಮನೆಗೆ ಪ್ರಚಾರದ ಮೂಲಕ ಮೊದಲ, ಎರಡನೆಯ ಮತ್ತು ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡುವುದಾಗಿದೆ. ಇದರಲ್ಲಿ ವೃದ್ಧಾಶ್ರಮಗಳು, ಶಾಲೆಗಳು ಮತ್ತು ಕಾಲೇಜುಗಳನ್ನು ಕೇಂದ್ರೀಕರಿಸಲಾಗಿದೆ.ಈ ಸಂಬಂಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಗಿದೆ.
ಶಾಲೆಯಿಂದ ಹೊರಗಿರುವ ಮಕ್ಕಳನ್ನು , (ಜೈಲುಗಳು, ಇಟ್ಟಿಗೆ ಗೂಡುಗಳು, ಇತ್ಯಾದಿಗಳನ್ನು ಒಳಗೊಂಡಿರುತ್ತದೆ) ಗುರುತಿಸಿ ಈ ಯೋಜನೆಗಳ ಸೌಲಭ್ಯಗಳನ್ನು ನೀಡುವ ಕ್ರಮಕೈಗೊಳ್ಳಲಾಗುತ್ತದೆ.
ಇಲ್ಲಿಯವರೆಗೆ ರಾಷ್ಟ್ರೀಯ ಕೋವಿಡ್ ಲಸಿಕೆ ಅಭಿಯಾನದ ಅಡಿ 193.57 ಕೋಟಿ ಡೋಸ್‌ಗಳನ್ನು ನೀಡಲಾಗಿದೆ. 15 ವರ್ಷಕ್ಕಿಂತ ಮೇಲ್ಪಟ್ಟ 96.3 ಪ್ರತಿಶತದಷ್ಟು ಜನರು ಕನಿಷ್ಠ ಒಂದು ಡೋಸ್ ಅನ್ನು ಪಡೆದಿದ್ದಾರೆ ಮತ್ತು 86.3 ಪ್ರತಿಶತದಷ್ಟು ಜನರು 19 ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.
ಹರ್ ಘರ್ ದಸ್ತಕ್ ಅಭಿಯಾನವನ್ನು ಈ ಹಿಂದೆ ನವೆಂಬರ್ 2021 ರಲ್ಲಿ ನಡೆಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!