Wednesday, February 8, 2023

Latest Posts

ಪಂಜಾಬ್‌ ಸರ್ಕಾರದ ಮೇಲೆ ಮತ್ತೆ ಭ್ರಷ್ಟಾಚಾರದ ತೂಗುಕತ್ತಿ: ಮತ್ತೊಂದು ವಿಕೆಟ್ ಪತನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್‌ ನ ಆಮ್ ಆದ್ಮಿ ಸರ್ಕಾರದ ಮೇಲೆ ಮತ್ತೆ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿದ್ದು, ಸಿಎಂ ಭಗವಂತ್ ಮಾನ್ ಗೆ ಮತ್ತೆ ಸಂಕಷ್ಟ ಎದುರಾಗಿದೆ.

ಸರಕಾರದ ತೋಟಗಾರಿಕೆ ಸಚಿವ ಫೌಜ್ ಸಿಂಗ್ ಮೇಲೆ ಇದೀಗ ಸುಲಿಗೆ ಹಾಗೂ ಭ್ರಷ್ಟಾಚಾರ ಕುರಿತು ಆರೋಪಗಳು ಕೇಳ ಬರುತ್ತಿದ್ದು , ಹೊಸ ಸಂಚಲನ ಸೃಷ್ಟಿಸಿದೆ.

ಇದೀಗ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದ್ದಂತೆ ತೋಟಗಾರಿಕೆ ಸಚಿವ ಫೌಜ್ ಸಿಂಗ್ ಇದೀಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಪಂಜಾಬ್‌ನಲ್ಲಿ ಭ್ರಷ್ಟಚಾರ ಆರೋಪದಡಿ ಆಪ್ ಸರ್ಕಾರದ ಒಂದೊಂದೆ ವಿಕೆಟ್ ಪತನಗೊಳ್ಳಲು ಆರಂಭಗೊಂಡಿದೆ.

ಫೌಜ್ ಸಿಂಗ್ ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್‌ಗೆ ಸಲ್ಲಿಸಿದ್ದಾರೆ. ಇತ್ತ ಸರ್ಕಾರಕ್ಕೆ ತೀವ್ರ ಮುಜುಗರ ತಂದಿರುವ ಫೌಜ್ ಸಿಂಗ್ ರಾಜೀನಾಮೆಯನ್ನು ಮರುಕ್ಷಣದಲ್ಲೇ ಮುಖ್ಯಮಂತ್ರಿ ಸ್ವೀಕರಿಸಿದ್ದಾರೆ. ಫೌಜ್ ಸಿಂಗ್ ಹಾಗೂ ಆಪ್ತ ಸೇರಿ ಕೆಲ ಕಾಂಟ್ರಾಕ್ಟರ್‌ಗಳಿಂದ ಸುಲಿಗೆ ಮಾಡಲು ಪ್ಲಾನ್ ಮಾಡಿದ್ದರು. ಈ ಕುರಿತ ಆಡಿಯೋ ಟೇಪ್ ಬಹಿರಂಗವಾಗಿತ್ತು. ಸರ್ಕಾರದ ಅಧಿಕಾರಿಗಳ ನೆರವು ಪಡೆದು ಕಾಂಟ್ರಾಕ್ಟರ್‌ಗಳಿಂದ ಒಂದಷ್ಟು ಹಣ ವಸೂಲಿ ಮಾಡಲು ಪ್ಲಾನ್ ಮಾಡಿದ್ದರು.

ಭ್ರಷ್ಟಾಚಾರ, ಸುಲಿಗೆ ಆರೋಪದಡಿ ಆಮ್ ಆದ್ಮಿ ಸರ್ಕಾರದಿಂದ ಹೊರಬಿದ್ದ ಸಚಿವರ ಸಂಖ್ಯೆ 2ಕ್ಕೇರಿದೆ. ಫೌಜ್ ಸಿಂಗ್‌ಗೂ ಮೊದಲು ಆರೋಗ್ಯ ಸಚಿವ ಡಾ. ವಿಜಯ್ ಸಿಂಗ್ಲಾ ವಿರುದ್ದ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!