Sunday, December 10, 2023

Latest Posts

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ : ಬಿಜೆಪಿ‌‌‌ ಶಾಸಕ‌‌ ಸಿಮೆಂಟ್ ಮಂಜು ಆರೋಪ

ಹೊಸದಿಗಂತ ಆಲೂರು : 

ರಾಜ್ಯ ಲೂಟಿ ಹೊಡೆಯುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡಿಸಿ ಭಾರತೀಯ ಜನಾತಪಾರ್ಟಿಯ ಆಲೂರು-ಕಟ್ಟಾಯ ಮಂಡಲದ ವತಿಯಿಂದ ಶಾಸಕ ಸಿಮೆಂಟ್ ಮಂಜು ಇಂದು ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಶಾಸಕ ಸಿಮೆಂಟ್ ಮಂಜು ಮಾತನಾಡಿ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರಾಜ್ಯ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಸರ್ಕಾರದ ಯಜಮಾನರುಗಳು ತಮ್ಮ ಶಿಷ್ಯಂದಿರ ಮೂಲಕ ಸರ್ಕಾರದ ಹಣವನ್ನು ಲೂಟಿ ಮಾಡಲು ಹೊರಟಿದ್ದಾರೆ ತಮ್ಮ ಶಿಷ್ಯರ ಮನೆಯಲ್ಲಿ 87 ಕೋಟಿ ಹಣ ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಇದು ರಾಜ್ಯದ ಜನರ ಶ್ರಮದ ಹಣವನ್ನು ಪಂಚ ರಾಜ್ಯಗಳ ಚುನಾವಣೆ ಖರ್ಚಿಗೆ ಕೈ ಸರ್ಕಾರ ನೀಡುತ್ತಿದೆ ಇದಕ್ಕೆ ಸಾಕಷ್ಟು ಪುರಾವೆಗಳನ್ನು ಕಲೆ ಹಾಕುತ್ತಿದೆ ರಾಜ್ಯದ ಪುಕ್ಕಟ್ಟೆ ವಿದ್ಯುತ್ ನೀಡುತ್ತೇವೆ ಎಂದು ಹೇಳಿ ದಿನದಲ್ಲಿ ಕೇವಲ ಎರಡು ಗಂಟೆ ವಿದ್ಯುತ್ ನೀಡಲು ಸಾದ್ಯವಾಗುತ್ತಿಲ್ಲ ಅಧಿಕಾರಕ್ಕೆ ಬಂದ ಮೂರ್ನಾಲ್ಕು ತಿಂಗಳಲ್ಲಿ ಜನಸಾಮಾನ್ಯರು ಹಿಡಿಶಾಪ ಹಾಕುತ್ತಿದ್ದಾರೆ ಗ್ಯಾರಂಟಿ ಹೆಸರಿನಲ್ಲಿ ಜನರನ್ನ ವಂಚಿಸುತ್ತಿದೆ ಇದುವರೆವಿಗೂ ಯಾವ ಶಾಸಕರ ಕ್ಷೇತ್ರಗಳಿಗೂ ಒಂದು ನಯಾಪೈಸೆ ಹಣ ಬಿಡುಗಡೆ ಮಾಡುತ್ತಿಲ್ಲ ಮತ ನೀಡಿದ ಮತದಾರರ ಮೂಗಿಗೆ ತುಪ್ಪ ಸವರುತ್ತಿದ್ದಾರೆ ಈಗಾಗಲೇ ಜನ ನಿಮ್ಮ ಆಟವನ್ನು ಗಮನಿಸುತ್ತಿದ್ದಾರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬುದ್ದಿ ಕಲಿಸಲಿದ್ದಾರೆ

ಹಿಂದು ಸಂಘಟನೆ ಬಗ್ಗೆ ಮಾತನಾಡುತ್ತಿದ್ದ ಪ್ರೊ.ಭಗವಾನ್ ಈಗ ಒಕ್ಕಲಿಗರ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ಎಲ್ಲಾ ಸಮುದಾಯದ ಭಾವನೆಗಳಿಗೂ ಧಕ್ಕೆಯಾಗಿದೆ ಹೇಳಿಕೆಗೆ ಹಿಂಪಡೆದು ಕ್ಷಮೆ ಯಾಚಿಸಬೇಕು ಸರ್ಕಾರ ಕೂಡಲೇ ಪ್ರೊ.ಭಗವಾನ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ನಾಗರಾಜ್,ಲೋಕೇಶ್ ಕಣಗಾಲ್,ಅಜಿತ್ ಚಿಕ್ಕಣಗಾಲ್,ಗಣೇಶ್ ಬೈರಾಪುರ,ಭರಣ್,ಹನುಮಂತೇಗೌಡ, ಹೇಮಂತ್,ಲೋಹಿತ್,ನಟರಾಜ್ ಸೊಂಪುರ,ಬಾಲಲೋಚನ,ಮೋಹನ್ ಮಾವನೂರು,ನಂಜುಂಡಪ್ಪ, ಬಸವರಾಜ್,ಕಿರಣ್ ಹೊಳೆಬೆಳ್ಳೂರು,ರವಿಕುಮಾರ್,ಸೇರಿದಂತೆ ಇತರರು ಬಾಗಿಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!