ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಧಾರವಾದ ಬಹು ನಿರೀಕ್ಷಿತ ಜಾತಿ ಗಣತಿ ವರದಿಯ ಅಂಕಿ-ಅಂಶ ಬಹಿರಂಗ ಆಗಿದೆ. ಈ ಸಮೀಕ್ಷೆಗೆ ಒಟ್ಟು 5 ಕೋಟಿ 98 ಲಕ್ಷ 14 ಸಾವಿರದ 942 ಜನರು ಒಳಪಟ್ಟಿದ್ದಾರೆ
ರಾಜ್ಯದ ಒಟ್ಟೂ ಜಾತಿಗಣತಿ ಸಂಖ್ಯೆ
ವೀರಶೈವ ಲಿಂಗಾಯತ
ಒಟ್ಟು – 66,35,233
ಶೇ. 11.09
ನಗರ – 16,61862
ಗ್ರಾಮೀಣ – 4973371
ಒಕ್ಕಲಿಗರು
ಒಟ್ಟು – 61,68,652
ಶೇ. 10.31
ನಗರ – 16,95,514
ಗ್ರಾಮೀಣ – 44,73,138
ಕುರುಬ
ಒಟ್ಟು – 43,72,847
ಶೇ. 7.31
ನಗರ – 7,72,641
ಗ್ರಾಮೀಣ – 36,00,206
ಪರಿಶಿಷ್ಟ ಜಾತಿ
ಒಟ್ಟು – 1,09,29,347
ಶೇ.18.27
ನಗರ – 28,47,232
ಗ್ರಾಮೀಣ – 80,82,115
ಪರಿಶಿಷ್ಟ ಪಂಗಡ
ಒಟ್ಟು – 42,81,289
ಶೇ. 7.16
ನಗರ – 6,60,209
ಗ್ರಾಮೀಣ – 36,21,080
ಮುಸ್ಲಿಂ
ಒಟ್ಟು – 76,99,425
ಶೇ.12.87
ನಗರ – 44,63,030
ಗ್ರಾಮೀಣ – 32,36,395
ಬ್ರಾಹ್ಮಣ
ಒಟ್ಟು – 15,64,741
ಶೇ.2.61
ನಗರ – 11,27,070
ಗ್ರಾಮೀಣ – 4,37,671
ರಾಜ್ಯದಲ್ಲಿ ಎಸ್ಸಿ ಜನಸಂಖ್ಯೆ 1,09,29,347, ಎಸ್ಟಿ ಜನಸಂಖ್ಯೆ 42,81,289, ಪ್ರವರ್ಗ 1ಎ ಜನಸಂಖ್ಯೆ 34,96,638, ಪ್ರವರ್ಗ 1ಬಿ ಜನಸಂಖ್ಯೆ 73,92,313, ಪ್ರವರ್ಗ 2ಎ ಜನಸಂಖ್ಯೆ 77,78,209 ಇದ್ದು ಪ್ರವರ್ಗ 2B ಜನಸಂಖ್ಯೆ 75,25,880 ಇದೆ. ಪ್ರವರ್ಗ 3A ಜನ ಸಂಖ್ಯೆ 72,99,577 ಇದ್ದು, 3B ಜನಸಂಖ್ಯೆ 81,37,536 ಇದೆ ಎಂದು ತಿಳಿದುಬಂದಿದೆ.
ಅದೇ ರೀತಿಯಾಗಿ ಪ್ರವರ್ಗ 1 ರಲ್ಲಿ 97 ಜಾತಿಗಳು, ಪ್ರವರ್ಗ 2ಎ ರಲ್ಲಿ 102 ಜಾತಿಗಳು, ಪ್ರವರ್ಗ 2B ಯಲ್ಲಿ ಮುಸ್ಲಿಂ, ಪ್ರವರ್ಗ 3ಅ ಅಲ್ಲಿ ಒಕ್ಕಲಿಗ , ಬಲಿಜ, ಕೊಡವ ಪ್ರವರ್ಗ 3B ಅಲ್ಲಿ ಲಿಂಗಾಯತ – ವೀರಶೈವ ಲಿಂಗಾಯತ, ಲಿಂಗಾಯತ ಉಪ ಪಂಗಡಗಳು, ಮರಾಠ, ಕೊಂಕಣ ಮರಾಠ, ಕ್ಷತ್ರಿಯ, ಕ್ರಿಶ್ಚಿಯನ್ ಇವೆ ಎಂದು ತಿಳಿದುಬಂದಿದೆ.