ಬಿಗ್‍ಬಾಸ್ ರಸದೌತಣಕ್ಕೆ ಕ್ಷಣಗಣನೆ: ಆಗಸ್ಟ್‌ 6 ರಿಂದ ವೂಟ್‍ನಲ್ಲಿ ಮನರಂಜನೆ ಶುರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಆಗಸ್ಟ್ 6 ರಿಂದ ವೂಟ್‍ನಲ್ಲಿ ಕನ್ನಡದ ಬಿಗ್‍ಬಾಸ್ ಪ್ರಸಾರವಾಗಲಿದೆ. ಒಟಿಟಿ ಪ್ಲಾಟ್‍ಫಾರ್ಮ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಗ್‍ಬಾಸ್ ಕನ್ನಡದ ಡಿಜಿಟಲ್ ಎಕ್ಸ್‌ಕ್ಲೂಸಿವ್‌ ಆವೃತ್ತಿ ಇದಾಗಿದೆ.

ಕಳೆದ ವರ್ಷ ಒಟಿಟಿ ಹಿಂದಿಯಲ್ಲಿ ಬಿಗ್‍ಬಾಸ್ ರಿಯಾಲಿಟಿ ಶೋ ಯಶಸ್ವಿಯಾಗಿದ್ದು, ಈ ಹಿನ್ನೆಲೆ ಎಲ್ಲಾ ಕನ್ನಡ ವೀಕ್ಷಕರಿಗೆ 2022ರ 6 ಆಗಸ್ಟ್‌ರಿಂದ ಅತಿ ಹೆಚ್ಚು ಮನರಂಜನೆ ಮತ್ತು ಡ್ರಾಮದ ಬಿಗ್‍ಬಾಸ್ ರಸದೌತಣವನ್ನು ನೀಡುತ್ತಿದೆ.

ಈ ಕಾರ್ಯಕ್ರಮವನ್ನು ವಿಮಲ್ ಇಲೈಚಿ ಮತ್ತು ಪೇಟಿಎಂ ಸಹ ಪ್ರಾಯೋಜಕ ಸಂಸ್ಥೆಯಾಗಿ ವೀಕ್ಷಕರಿಗೆ ಮನರಂಜನೆಯನ್ನು ಉಣಬಡಿಸಲಿವೆ. ಬಿಗ್‍ಬಾಸ್ ಒಟಿಟಿ ಕನ್ನಡವು 6 ವಾರಗಳ ಅಭೂತಪೂರ್ವವಾದ ಕಾರ್ಯಕ್ರಮವಾಗಿದೆ.
ವೀಕ್ಷಕರು ವಿಶೇಷ ಕಟ್‍ಗಳು, ರೌಂಡ್-ದಿ-ಕ್ಲಾಕ್ ಕಂಟೆಂಟ್ ಡ್ರಾಪ್‍ಗಳು ಮತ್ತು ಸಂಪೂರ್ಣ ಸಂವಾದಾತ್ಮಕ 24/7 ಲೈವ್‍ಫೀಡ್ ಅನ್ನು ಮನೆಯಿಂದ ವೀಕ್ಷಿಸುವ ಅನುಭವವನ್ನು ನೀಡುತ್ತದೆ.

ಕಿಚ್ಚ ಸುದೀಪ್ ಮಾತನಾಡಿ, ಈ ಬಿಗ್ ಬಾಸ್ ಒಟಿಟಿ ಸೀಸನ್‍ನಲ್ಲಿ ಬಿಗ್‍ಬಾಸ್ ಮನೆಯೊಳಗೆ ಏನು ನಡೆಯುತ್ತಿದೆ ಎಂಬುದರ ಕುರಿತು ವೀಕ್ಷಕರು ಅಂತಿಮ ಅಭಿಪ್ರಾಯವನ್ನು ಹೊಂದಿರುತ್ತಾರೆ. ಅವರು, 24/7 ಸ್ಪರ್ಧಿಗಳನ್ನು ನೋಡುತ್ತಾರೆ ಮತ್ತು ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತಾರೆ. ಇದು ಸ್ಪರ್ಧಿಗಳು ಆಟವನ್ನು ಆಡುವ ವಿಧಾನವನ್ನು ಬದಲಾಯಿಸುತ್ತದೆ. ಇದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ’’ ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!