ಐಪಿಎಲ್‌ ಸಂಭ್ರಮಕ್ಕೆ ಕ್ಷಣಗಣನೆ: ಕ್ರೀಡಾಭಿಮಾನಿಗಳಿಗಾಗಿ ದೇಶದ 50 ನಗರಗಳಲ್ಲಿ ‘ಫ್ಯಾನ್‌ ಪಾರ್ಕ್‌’!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2024) 17ನೇ ಆವೃತ್ತಿ ಆರಂಭಕ್ಕೆ ಕ್ಷಣಗಣನೆ ಬಾಕಿ ಉಳಿದಿದ್ದು, ಈ ಮೆಗಾ ಕ್ರಿಕೆಟ್​ ಟೂರ್ನಿಯನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

ಇತ್ತ ಈ ಸಂಭ್ರಮಕ್ಕೆ ಬಿಸಿಸಿಐ ಮತ್ತಷ್ಟು ಸಿಹಿ ಸೇರಿಸಿದ್ದು, ದೇಶದ 50 ನಗರಗಳಲ್ಲಿ ‘ಐಪಿಎಲ್‌ ಫ್ಯಾನ್‌ ಪಾರ್ಕ್‌'(TATA IPL Fan Park 2024) ಆಯೋಜನೆ ಮಾಡಲು ತೀರ್ಮಾನಿಸಿದೆ.

BCCI ಕ್ರಿಕೆಟ್​ ಆಟವನ್ನು ಜಗತ್ತಿನಾದ್ಯಂತ ಮತ್ತು ದೇಶದ ಅಭಿಮಾನಿಗಳಿಗೆ ಹತ್ತಿರದಿಂದ ನೋಡುವಂತಾಗಲು 2015 ರಲ್ಲಿ ಫ್ಯಾನ್(IPL Fan Park) ಪಾರ್ಕ್ ಪರಿಕಲ್ಪನೆಯನ್ನು ಜಾರಿಗೆ ತಂದಿತು. ಆದ್ರೆ ಕೊರೋನಾದಿಂದ ಮೂರು ವರ್ಷಗಳ ಕಾಲ ಫ್ಯಾನ್ ಪಾರ್ಕ್ ಆಯೋಜನೆ ಮಾಡಿರಲಿಲ್ಲ. ಇದೀಗ ಕಳೆದ ಮತ್ತೆ ಫ್ಯಾನ್ ಪಾರ್ಕ್​ಗೆ ಚಾಲನೆ ನೀಡಲಿದೆ.

ಮಾರ್ಚ್​ 22 ರಂದು ಟೂರ್ನಿಯ ಮೊದಲ ಪಂದ್ಯ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(CSK vs RCB)​ ಮತ್ತು ಆರ್​ಸಿಬಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಎಂ.ಎ. ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ. ಈ ಪಂದ್ಯದ ಫ್ಯಾನ್ ಪಾರ್ಕ್ ಪ್ರಸಾರ ಮಧುರೈನಲ್ಲಿ ನಡೆಯಲಿದೆ.

ಅದೇ ರೀತಿ ದೇಶದ 11 ರಾಜ್ಯಗಳಾದ ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತಮಿಳುನಾಡು, ಉತ್ತರಾಖಂಡ, ಗುಜರಾತ್, ಕರ್ನಾಟಕ, ಜಾರ್ಖಂಡ್, ಪಂಜಾಬ್ ಮತ್ತು ತೆಲಂಗಾಣದ ಪ್ರಮುಖ ನಗರಗಳಲ್ಲಿ ಬಹುನಿರೀಕ್ಷಿತ ಐಪಿಎಲ್​ ಫ್ಯಾನ್ ಪಾರ್ಕ್‌ಗಳನ್ನು ಆಯೋಜನೆ ಮಾಡಲಾಗಿದೆ. ಇಲ್ಲಿ ಮೊದಲ ಹಂತದ ಪಂದ್ಯಗಳು ಮಾತ್ರ ಪ್ರಸಾರಗೊಳ್ಳಲಿದೆ ಎಂದು ಐಪಿಎಲ್​ ಆಡಳಿತ ಮಂಡಳಿ ತಿಳಿಸಿದೆ.

ಮುಂದಿನ ಫ್ಯಾನ್ ಪಾರ್ಕ್‌ಗಳ ಸ್ಥಳಗಳನ್ನು ಉಳಿದಾರ್ಧದ ವೇಳಾಪಟ್ಟಿಯ ಪ್ರಕಾರ ಪ್ರಕಟಿಸಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.

ಫ್ಯಾನ್ ಪಾರ್ಕ್ ನಗರಗಳ ಸಂಪೂರ್ಣ ಪಟ್ಟಿ

  • ಮಾರ್ಚ್ 23, 24: ಮೀರತ್ (ಉತ್ತರ ಪ್ರದೇಶ)
  • ಏಪ್ರಿಲ್ 6, 7: ವಾರಣಾಸಿ (ಉತ್ತರ ಪ್ರದೇಶ)
  • ಮಾರ್ಚ್ 23, 24: ಬಿಕಾನೇರ್ (ರಾಜಸ್ಥಾನ)
  • ಮಾರ್ಚ್ 23, 24: ಮಿಡ್ನಾಪುರ (ಪಶ್ಚಿಮ ಬಂಗಾಳ)
  • ಮಾರ್ಚ್ 23, 24: ಸೋಲಾಪುರ (ಮಹಾರಾಷ್ಟ್ರ)
  • ಏಪ್ರಿಲ್ 6, 7: ನಾಗ್ಪುರ (ಮಹಾರಾಷ್ಟ್ರ)
  • ಮಾರ್ಚ್ 22, 23: ಮಧುರೈ (ತಮಿಳುನಾಡು)
  • ಮಾರ್ಚ್ 30, 31: ಕೊಯಮತ್ತೂರು (ತಮಿಳುನಾಡು)
  • ಏಪ್ರಿಲ್ 6, 7: ಡೆಹ್ರಾಡೂನ್ (ಉತ್ತರಾಖಂಡ)
  • ಏಪ್ರಿಲ್ 6, 7: ರಾಜ್‌ಕೋಟ್ (ಗುಜರಾತ್)
  • ಮಾರ್ಚ್ 30, 31: ನಾಡಿಯಾಡ್ (ಗುಜರಾತ್)
  • ಏಪ್ರಿಲ್ 6, 7: ಮೈಸೂರು (ಕರ್ನಾಟಕ)
  • ಮಾರ್ಚ್ 30, 31: ಜಮ್ಶೆಡ್ಪುರ (ಜಾರ್ಖಂಡ್)
  • ಮಾರ್ಚ್ 30, 31: ಪಟಿಯಾಲ (ಪಂಜಾಬ್)
  • ಮಾರ್ಚ್ 30, 31: ನಿಜಾಮಾಬಾದ್ (ತೆಲಂಗಾಣ)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!