ಹೊಸದಿಗಂತ ವರದಿ, ಕೊಪ್ಪಳ:
ಮಲೆನಾಡಿನಲ್ಲಿ ಉತ್ತಮ ಮಳೆಯಾಗಿದ್ದು, ತುಂಗಭದ್ರಾ ಜಲಾಶಯ ಭಾಗಶಃ ಭರ್ತಿಯಾಗಿದೆ. ಜಲಾಶಯ ದಿಂದ ನದಿಗೆ ನೀರು ಯಾವುದೇ ಕ್ಷಣದಲ್ಲಿ ನೀರು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದ್ದ ಟಿಬಿ ಡ್ಯಾಂ ಬೋರ್ಡ್ ನಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.
ಸುಮಾರು 5000 ರಿಂದ 01 ಲಕ್ಷ ಕ್ಯೂಸೆಕ್ ವರೆಗೂ ನೀರು ಬಿಡುಗಡೆಯ ಸಂಭವ ಇದೆ ಎಂದು ಎಚ್ಚರಿಕೆಯಲ್ಲಿ ತಿಳಿಸಿದೆ. ಪ್ರಸ್ತುತ ಜಲಾಶಯಕ್ಕೆ 90 ಸಾವಿರಕ್ಕೂ ಅಧಿಕ ಕ್ಯೂಸಕ್ ನೀರು ಹರಿದು ಬರುತ್ತಿದ್ದು, ಜಲಾಶಯ 95 ಟಿಎಂಸಿ ಭರ್ತಿಯಾಗಿದೆ.