ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯ ಇಂದು ದಾಖಲೆಯ 16ನೇ ಬಜೆಟ್ ಮಂಡಿಸಲಿದ್ದಾರೆ. ಅಭಿವೃದ್ಧಿ ಕಾರ್ಯ ಮತ್ತು ಗ್ಯಾರಂಟಿಗಳನ್ನು ಬ್ಯಾಲೆನ್ಸ್ ಮಾಡುವ ದೊಡ್ಡ ಸವಾಲು ಸಿಎಂ ಮುಂದಿದ್ದು, ಎಲ್ಲರೂ ಬಜೆಟ್‌ನ್ನು ಎದುರು ನೋಡುತ್ತಿದ್ದಾರೆ.
ಈ ಬಾರಿ ಸಿಎಂ 4 ಲಕ್ಷ ಕೋಟಿಯ ಬಜೆಟ್ ಮಂಡಿಸುವ ಸಾಧ್ಯತೆಯಿದ್ದು, ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಬಜೆಟ್‌ನಲ್ಲಿ ಮುಜರಾಯಿ ಇಲಾಖೆಗೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಕೆ.ಆರ್ ಸರ್ಕಲ್‌ನಲ್ಲಿ ನಿರ್ಮಿಸುತ್ತಿರುವ ಧಾರ್ಮಿಕ ಸೌಧ ಕಾಮಗಾರಿಗೆ 25 ಕೋಟಿ ರೂ. ಒದಗಿಸಲು ಮನವಿ ಮಾಡಲಾಗಿದೆ. ಮೆಜೆಸ್ಟಿಕ್‌ನ ಕೆಂಪೇಗೌಡ ವೃತ್ತದಲ್ಲಿ ಬಂಡಿಶೇಷಮ್ಮ ವಿದ್ಯಾರ್ಥಿ ನಿಲಯ ಹಾಗೂ ಸಂಕೀರ್ಣ ನಿರ್ಮಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲು ಚಿಂತಿಸಲಾಗಿದೆ. ರಾಜ್ಯದಿಂದ ವೈಷ್ಣೋದೇವಿ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ತಲಾ 5,000 ಸಹಾಯಧನ ಒದಗಿಸಲು 1 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.