Sunday, December 10, 2023

Latest Posts

ಕನ್ನಡ ಬಿಗ್​ಬಾಸ್ ಆರಂಭಕ್ಕೆ ಕ್ಷಣಗಣನೆ: ಮನೆ ಒಳಗೆ ಹೋಗುವ ಮುನ್ನವೇ ಎಲಿಮಿನೇಷನ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡ ಬಿಗ್​ಬಾಸ್ (Bigg Boss)10ನೇ ಸೀಸನ್ ಇಂದಿನಿಂದ ಅಕ್ಟೋಬರ್ 08 ಪಯಣ ಶುರುವಾಗಲಿದ್ದು, ಉದ್ಘಾಟನೆ ಕಾರ್ಯಕ್ರಮದ ಪ್ರೋಮೋಗಳನ್ನು ಸಹ ಕಲರ್ಸ್ ವಾಹಿನಿ ಹಂಚಿಕೊಂಡಿದೆ.

ಇದ್ರಲ್ಲಿ ಟ್ವಿಸ್ಟ್ ನೀಡಿದ್ದು, ಮನೆಯ ಒಳಗೆ ಹೋಗಲಿರುವ ಕೆಲವು ಸ್ಪರ್ಧಿಗಳ ಮಾಹಿತಿ ಪ್ರೋಮೋದಿಂದ ಬಹಿರಂಗವಾಗಿದೆ. ಮಾತ್ರವಲ್ಲದೆ, ಟಾಸ್ಕ್ ಒಂದನ್ನು ಎದುರಿಸಿ ಗೆದ್ದವರಷ್ಟೆ ಈ ಬಾರಿ ಬಿಗ್​ಬಾಸ್ ಮನೆ ಪ್ರವೇಶ ಮಾಡಲಿರುವುದು ವಿಶೇಷ.

ಸ್ಪರ್ಧಿಗಳನ್ನು ಬಿಗ್​ಬಾಸ್ ಮನೆಯ ಒಳಗೆ ಬಿಡುವ ಮೊದಲು ಅವರಿಗೊಂದು ಟಾಸ್ಕ್ ಇರಲಿದೆ. ಇದು ಬಿಗ್​ಬಾಸ್ ಮನೆಯ ಒಳಗೆ ನಡೆಯುವ ಟಾಸ್ಕ್​ಗಳ ರೀತಿಯಾದದ್ದಲ್ಲ. ಯಾವುದೇ ಸ್ಪರ್ಧಿ ಬಿಗ್​ಬಾಸ್ ಮನೆಯ ಒಳಗೆ ಹೋಗಲು ಅರ್ಹರೇ ಅಥವಾ ಅಲ್ಲವೇ ಎಂಬುದನ್ನು ಕಾರ್ಯಕ್ರಮದಲ್ಲಿ ಹಾಜರಿದ್ದ ಜನರೇ ನಿರ್ಣಯ ಮಾಡುತ್ತಾರೆ. ಜನರ ಮತ ಪಡೆದ ಸ್ಪರ್ಧಿಗಳು ಮಾತ್ರವೇ ಬಿಗ್​ಬಾಸ್ ಮನೆ ಪ್ರವೇಶಿಸಲಿದ್ದಾರೆ.

ಯಾವ ಸ್ಪರ್ಧಿ 40% ಗೂ ಹೆಚ್ಚು ಮತಗಳನ್ನು ಗಳಿಸುತ್ತಾನೆಯೋ ಆ ಸ್ಪರ್ಧಿ ಮಾತ್ರವೇ ಬಿಗ್​ಬಾಸ್ ಮನೆಯ ಒಳಗೆ ಹೋಗಲು ಅರ್ಹನಾಗುತ್ತಾನೆ. ಕಲರ್ಸ್ ವಾಹಿನಿ ಇದೀಗ ಬಿಡುಗಡೆ ಮಾಡಿರುವ ಪ್ರಮೋನಲ್ಲಿ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ಡ್ರೋನ್ ಪ್ರತಾಪ್ ಹಾಗೂ ಮಾಲೂರು ಸಂತೋಶ್ ಅವರುಗಳು ಬಿಗ್​ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಮೂವರಲ್ಲಿ ಜನರ ಮತಗಳನ್ನು ಪಡೆದು ಬಿಗ್​ಬಾಸ್ ಮನೆಯ ಒಳಗೆ ಹೋಗುವವರು ಯಾರು? ವೇದಿಕೆಯಿಂದಲೇ ಹೊರಕ್ಕೆ ನಿರ್ಗಮಿಸುವವರು ಯಾರು ಎಂಬುದು ಎಪಿಸೋಡ್ ನೋಡಿದ ಬಳಿಕವಷ್ಟೆ ತಿಳಿಯಲಿದೆ.

ಈ ಬಾರಿಯ ಬಿಗ್‌ ಬಾಸ್‌ ಸ್ಪರ್ಧಿಗಳು ಯಾರು ಎನ್ನುವುದನ್ನು ನೋಡುವುದಕ್ಕೆ ಪ್ರೇಕ್ಷಕರು ಕುತೂಹಲದಿಂದ ಕಾದು ಕೂತಿದ್ದಾರೆ.

ಇದೀಗ ಮೂಲಗಳ ಪ್ರಕಾರ ಅಸಲಿ ಪಟ್ಟಿ ಔಟ್‌ ಆಗಿದೆ.
ಚಾರ್ಲಿ , ಡ್ರೋನ್‌ ಪ್ರತಾಪ್ , ರಕ್ಷಕ್ ಬುಲೆಟ್ , ಕಾಮಿಡಿ ಕಿಲಾಡಿ ಸಂತೋಷ್,ಸಂಗೀತಾ ಶೃಂಗೇರಿ, ರ‍್ಯಾಪರ್ ಈಶಾನಿ, ನಮ್ರತಾ ಗೌಡ, ತನಿಷಾ ಕುಪ್ಪಂಡ, ವಿನಯ್‌ ಗೌಡ, ನೀತು ವನಜಾಕ್ಷಿ , ಗೌರೀಶ್ ಅಕ್ಕಿ ಮನೆ ಒಳಗೆ ಹೋಗುವುದು ಪಕ್ಕಾ ಎಂದು ಹೇಳಲಾಗುತ್ತಿದ್ದು, ಈ ಹೆಸರುಗಳ ಜತೆಗೆ ನಟಿ ಭಾಗ್ಯಶ್ರೀ ಮತ್ತು ವರ್ತೂರು ಸಂತೋಷ್ (ಹಳ್ಳಿಕಾರ್ ಇದೆ. ಇದುವರೆಗೆ ಬಿಗ್‌ ಬಾಸ್‌ ಯಾವುದೇ ಅಧಿಕೃತ ಪಟ್ಟಿ ಬಿಡುಗಡೆ ಮಾಡಿಲ್ಲ. ಬಿಗ್ ಬಾಸ್ ಕನ್ನಡವನ್ನು ಜಿಯೋ ಸಿನಿಮಾದಲ್ಲಿ 24ಗಂಟೆ ನೇರಪ್ರಸಾರವನ್ನು ವೀಕ್ಷಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!