OSCAR NOMINATIONS | ಆಸ್ಕರ್ ನಾಮಿನೇಷನ್ ಪಟ್ಟಿ ಬಿಡುಗಡೆಗೆ ಕ್ಷಣಗಣನೆ, ಭಾರತೀಯರಲ್ಲಿ ಹೆಚ್ಚಿದೆ ಕುತೂಹಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿ ಆಸ್ಕರ್ ಬಗ್ಗೆ ಭಾರತೀಯರಿಗೆ ಸಾಕಷ್ಟು ಆಸಕ್ತಿ, ಕುತೂಹಲ ಇದೆ. ಭಾರತದ ಸಿನಿಮಾಗಳಾದ ಆರ್‌ಆರ್‌ಆರ್ ಹಾಗೂ ಕಾಂತಾರ ಮೊದಲಾದ ಸಿನಿಮಾಗಳು ಅರ್ಹತೆ ಸುತ್ತಿಗೆ ಸ್ಥಾನ ಪಡೆದಿವೆ.

ಆಸ್ಕರ್ ನಾಮಿನೇಷನ್ ಪಟ್ಟಿ ಇಂದು ಸಂಜೆ ರಿಲೀಸ್ ಆಗಲಿದ್ದು, ಭಾರತದ ಯಾವ ಸಿನಿಮಾಗಳು ಆಯ್ಕೆಯಾಗಲಿವೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ, ಅದರಲ್ಲಿಯೂ ನಮ್ಮ ಕನ್ನಡದ ಕಾಂತಾರ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ.

ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್‌ನ ಸ್ಯಾಮುಯೆಲ್ ಗೋಲ್ಡ್‌ವಿನ್ ಥಿಯೇಟರ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಯಾವ ಯಾವ ಸಿನಿಮಾಗಳು ಆಸ್ಕರ್‌ಗೆ ನಾಮನಿರ್ದೇಶಿತವಾಗಿವೆ ಎಂದು ತಿಳಿಯಲಿದೆ.

ಭಾರತದ ಆರ್‌ಆರ್‌ಆರ್, ಚೆಲ್ಲೋ ಶೋ, ಆಲ್ ದಟ್ ಬ್ರೀತ್ಸ್, ಎಲಿಫೆಂಟ್ ವಿಸ್ಪರ‍್ಸ್. ಕಾಂತಾರ ಸಿನಿಮಾಗಳು ನಾಮನಿರ್ದೇಶನಗೊಳ್ಳುವ ಕುತೂಹಲ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!