ದೇಶಾದ್ಯಂತ UPI ಸರ್ವರ್ ಡೌನ್: ಪಾವತಿಗಳಲ್ಲಿ ಅಡಚಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೇಶಾದ್ಯಂತ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಸರ್ವರ್ ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದು, ಪಾವತಿಗಳಲ್ಲಿ ಅಡಚಣೆ ಉಂಟಾಗಿದೆ.
PhonePe, Google Pay ಮತ್ತು Paytm ನಂತಹ ಪ್ರಮುಖ UPI ಅಪ್ಲಿಕೇಶನ್‌ ಗಳಲ್ಲಿ ವಹಿವಾಟು ನಡೆಸಲು ಅಡಚಣೆ ಉಂಟಾಗಿದ್ದು, ಈ ಕುರಿತು ಬಳಕೆದಾರರು Twitter ನಲ್ಲಿ ಮಾಹಿತಿ ನೀಡಿದ್ದಾರೆ . ದೀರ್ಘ ಪ್ರಕ್ರಿಯೆಯ ಸಮಯದ ನಂತರ ವಿಫಲ ಪಾವತಿಗಳ ಕುರಿತು ಬಳಕೆದಾರರಿಗೆ ಸೂಚಿಸಲಾಗಿದೆ.
ವರ್ಷದಲ್ಲಿ ಇದು ಎರಡನೇ ಬಾರಿಗೆ UPI ಸರ್ವರ್ ಡೌನ್ ಆಗಿದೆ, ಕೊನೆಯ ಬಾರಿಗೆ ಜನವರಿ 9 ರಲ್ಲಿ ಆಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!