ಹೊಸದಿಗಂತ ಡಿಜಿಟಲ್ ಡೆಸ್ಕ್:
ಅವಿವಾ ಬಿದ್ದಪ್ಪ ಹಾಗೂ ನಟ ಅಭಿಷೇಕ್ ಅಂಬರೀಶ್ ಮಗನಿಗೆ ‘ರಾಣಾ ಅಭಿಷೇಕ್ ಅಮರ್’ ಎಂದು ಹೆಸರು ಇಡಲಾಗಿದೆ. ಈಗ ಅವಿವಾ ಸೋಶಿಯಲ್ ಮೀಡಿಯಾದಲ್ಲಿ ಮಗನ ನಾಮಕರಣ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅವಿವಾ ರೇಷ್ಮೆ ಸೀರೆ ಉಟ್ಟು, ಬಹಳ ಸರಳವಾಗಿ, ಸುಂದರವಾಗಿ ಕಂಡಿದ್ದಾರೆ. ಇನ್ನು ಅಭಿಷೇಕ್ ಕೂಡ ರೇಷ್ಮೆ ಪಂಚೆ, ಶರ್ಟ್ ಧರಿಸಿದ್ದರು. ಸಾಂಪ್ರದಾಯಿಕ ಡ್ರೆಸ್‌ನಲ್ಲಿ ಮಿಂಚಿರುವ ಇವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಪರ್ಷಿಯನ್ ಶಬ್ದದಲ್ಲಿ ರಾಣಾ ಎಂದರೆ ಕಾಂತಿಯುತ, ಹೊಳೆಯುವ ಎಂದರ್ಥ. ಅಂಬರೀಶ್ ಅವರ ಮೊದಲ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರ್‌ನಾಥ್ ಎಂದು. ಹೀಗಾಗಿ ಅಮರ್ ಹೆಸರನ್ನು ಕೂಡ ಅಲ್ಲಿ ಸೇರಿಸಲಾಗಿದ್ದು, ಒಟ್ಟಾಗಿ ರಾಣಾ ಅಮರ್ ಅಂಬರೀಶ್ ಎಂದು ಇಟ್ಟಿದ್ದಾರೆ.