ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಬ್ಯಾಚ್ಯುಲರ್ ಪಾರ್ಟಿ’ ಸಿನಿಮಾದಲ್ಲಿ ಎರಡು ಹಾಡುಗಳನ್ನು ಬಳಕೆ ಮಾಡಿದ್ದಕ್ಕಾಗಿ ಎಂಆರ್ ಟಿ (MRT) ಮ್ಯೂಸಿಕ್ ಸಂಸ್ಥೆಯು ದೆಹಲಿ ಹೈಕೋರ್ಟ್ ಮೆಟ್ಟಿಲು ಏರಿತ್ತು. ಕಾಪಿ ರೈಟ್ ಉಲ್ಲಂಘನೆ ಆಗಿರೋ ವಿಚಾರವನ್ನು ಉಲ್ಲೇಖಿಸಿತ್ತು. ಇದೀಗ ದೆಹಲಿ ಹೈಕೋರ್ಟ್ ರಕ್ಷಿತ್ ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಗೆ 20 ಲಕ್ಷ ರೂಪಾಯಿ ಠೇವಣಿ ಇಡುವಂತೆ ನಿರ್ದೇಶನ ನೀಡಿದೆ.
ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಎಂ.ಆರ್.ಟಿ ಹಕ್ಕು ಹೊಂದಿರೋ ‘ನ್ಯಾಯ ಎಲ್ಲಿದೆ’ ಮತ್ತು ‘ಒಮ್ಮೆ ನಿನ್ನನ್ನು’ ಹಾಡು ಬಳಕೆ ಮಾಡಿದ್ದರು ರಕ್ಷಿತ್ ಶೆಟ್ಟಿ. ಅನುಪತಿ ಪಡೆಯದೇ ಬಳಸಿದ್ದನ್ನೂ ಒಪ್ಪಿಕೊಂಡಿದ್ದರು. ತುಣುಕು ಹಾಡುಗಳನ್ನು ಬಳಸಿಕೊಳ್ಳಲು ಅನುಮತಿ ಬೇಕಾ ಎಂದು ಪ್ರಶ್ನೆ ಮಾಡಿದ್ದರು. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಇದೀಗ ರಕ್ಷಿತ್ ಶೆಟ್ಟಿ ಮತ್ತು ಪರಂವಾಗೆ ಹೈಕೋರ್ಟ್ ನೋಟಿಸ್ ನೀಡಿತ್ತು. ಈ ನೋಟಿಸ್ ಗೆ ರಕ್ಷಿತ್ ಶೆಟ್ಟಿ ಕೋರ್ಟಿಗೆ ಹಾಜರಾಗದ ಕಾರಣದಿಂದಾಗಿ ಸೋಷಿಯಲ್ ಮೀಡಿಯಾ ಸೇರಿದಂತೆ, ಹಾಡುಗಳು ಬಳಕೆಯಾದ ಕಡೆಯಲ್ಲಿ ತೆಗೆದುಹಾಕಬೇಕು ಮತ್ತು 20 ಲಕ್ಷ ರೂಪಾಯಿ ಠೇವಣಿ ಇಡಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.