ಕೊರೋನಾ ಆತಂಕದ ನಡುವೆ ದೆಹಲಿ ಮುಂಬೈ ಚರಂಡಿ ನೀರಿನಲ್ಲಿ ಪತ್ತೆಯಾಯಿತು CoV-2 RNA ವೈರಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ದೇಶದಲ್ಲಿ ಈಗ ಮತ್ತೆ ಕೊರೋನಾ ಆತಂಕ ಮನೆ ಮಾಡಿದ್ದು, ಇದರ ಬೆನ್ನಲ್ಲೇ ದೆಹಲಿ ಹಾಗೂ ಮುಂಬೈನಲ್ಲಿನ ಚರಂಡಿ ನೀರಿನ ಮಾದರಿಯಲ್ಲಿ CoV-2 RNA ವೈರಸ್ ಪತ್ತೆಯಾಗಿದೆ.

ಈ ಕುರಿತು ಖುದ್ದು ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಮಾಹಿತಿ ಬಹಿರಂಗ ಪಡಿಸಿದ್ದು, ಮತ್ತೊಂದು ಆತಂಕ ಶುರುವಾಗಿದೆ.

CoV-2 RNA ವೈರಸ್ ಪತ್ತೆಯಾದ ಹಿನ್ನೆಲೆ ದೆಹಲಿ ಹಾಗೂ ಮುಂಬೈನಲ್ಲಿ ಅಲರ್ಟ್ ಘೋಷಿಸಲಾಗಿದೆ. ಎಲ್ಲರೂ ಮಾಸ್ಕ್ ಧರಿಸುವಂತೆ ಸಚಿವರು ಮನವಿ ಮಾಡಿದ್ದಾರೆ.ಇದೇ ವೇಳೆ ಕೋವಿಡ್ ಮಾರ್ಗಸೂಚಿ ಪಾಲಿಸಲು ಮನವಿ ಮಾಡಿದ್ದಾರೆ.

ಸದ್ಯ CoV-2 RNA ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಂತೆ ಸೂಚಿಸಿದ್ದು, ಪರಿಸರ, ಒಳಚರಂಡಿ ಕಣ್ಗಾವಲು ಇಡಲು ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!