ಹೊಸದಿಗಂತ ಡಿಜಿಟಲ್ ಡೆಸ್ಕ್;
ಕೋವಿಡ್-19 ಅಕ್ರಮದ ತನಿಖೆಗೆ ರಾಜ್ಯ ಸರ್ಕಾರ SIT ರಚನೆಗೆ ಅನುಮತಿ ನೀಡಿದೆ.
ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಜಸ್ಟೀಸ್ ಮೈಕಲ್ ಡಿ ಕುನ್ಹಾ ಅವರ ಮಧ್ಯಂತರ ವರದಿ ಆಧರಿಸಿ ಅಕ್ರಮದ ತನಿಖೆಗೆ SIT ತನಿಖೆಗೆ ನಡೆಸದಲು ಕ್ಯಾಬಿನೆಟ್ ಒಪ್ಪಿಗೆ ಕೊಟ್ಟಿದೆ. ಇದರ ಜೊತೆಗೆ ಕ್ಯಾಬಿನೆಟ್ ಸಬ್ ಕಮಿಟಿ ರಚನೆಗೂ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.
ಕ್ಯಾಬಿನೆಟ್ ಸಭೆ ಮುಗಿದ ಬಳಿಕ ಪ್ರತಿಕ್ರಿಯೆ ನೀಡಿದ ಸಚಿವ ಎಚ್.ಕೆ.ಪಾಟೀಲ್, ಕುನ್ಹಾ ಆಯೋಗ 11 ಸಂಪುಟಗಳಲ್ಲಿ ವರದಿ ಸಲ್ಲಿಸಿದೆ. 7223.64 ಕೋಟಿ ಮೊತ್ತದ ಅಕ್ರಮ ಆಗಿರೋ ಕುರಿತು ತನಿಖೆ ನಡೆಯುತ್ತಿದೆ. ಇದರಲ್ಲಿ 500 ಕೋಟಿ ಮೊತ್ತದ ವಸೂಲಾತಿಗೆ ವರದಿಯಲ್ಲಿ ಆಯೋಗ ಶಿಫಾರಸು ಮಾಡಿದೆ.
BBMP ನಾಲ್ಕು ವಲಯಗಳ, 31 ಜಿಲ್ಲೆಗಳ ವರದಿ ಬಾಕಿ ಇದೆ. 55 ಸಾವಿರ ಕಡತಗಳನ್ನ ಸಂಬಂಧಿಸಿದ ಇಲಾಖೆಯಿಂದ ಮಾಹಿತಿ ಪಡೆದು ಆಯೋಗ ವರದಿ ನೀಡಿದೆ. ಈ ಹಿನ್ನಲೆಯಲ್ಲಿ SIT ರಚನೆಗೆ ಕ್ಯಾಬಿನೆಟ್ ನಿರ್ಧಾರ ಮಾಡಿದೆ ಎಂದು ತಿಳಿಸಿದರು.
ಅಕ್ರಮದಲ್ಲಿ ಯಾರೇ ಶಾಮೀಲಾಗಿದ್ದರೂ, SIT ತನಿಖೆ ಮಾಡುತ್ತೆ ಅಂತಾ ಸಚಿವರು ತಿಳಿಸಿದರು. ಇದಲ್ಲದೇ ಹಲವು ವಿಷಯಗಳಿಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಇದರ ವಿವರ ಹೀಗಿದೆ.
ಜೀವ ಉಳಿಸಿದ್ದೆ ತಪ್ಪಾಯ್ತೆ.