ಹೊಸದಿಗಂತ ಡಿಜಿಟಲ್ ಡೆಸ್ಕ್
ಚೀನಾದಲ್ಲಿ ಕೊರೋನಾ ಸೋಂಕು ಹಾಹಾಕಾರ ಸೃಷ್ಟಿಸುತ್ತಿದೆ. ಚೀನಾದಲ್ಲಿ ಸೃಷ್ಟಿಯಾದ ಹೊಸ ರೂಪಾಂತರಿ ವಿಶ್ವದ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಚೀನಾ ಪ್ರವಾಸಿಗರಿಗೆ ವಿಶ್ವದ ಹಲವು ರಾಷ್ಟ್ರಗಳು ನಿರ್ಬಂಧಗಳನ್ನು ವಿಧಿಸುತ್ತಿದೆ. ಈ ನಿಟ್ಟಿನಲ್ಲಿ ಅಮೆರಿಕಾವೂ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದು, ಅಮೆರಿಕಕ್ಕೆ ಚೀನಾದಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಎಂದು ಘೋಷಿಸಿದೆ.
ಜನವರಿ 5 ರಿಂದ, 2 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಚೀನಾ, ಹಾಂಗ್ ಕಾಂಗ್ ಅಥವಾ ಮಕಾವೊದಿಂದ ಆಗಮಿಸುವ ಎಲ್ಲಾ ಪ್ರಯಾಣಿಕರು ಎರಡು ದಿನಗಳ ಮೊದಲು ಕೊವಿಡ್ ಪರೀಕ್ಷೆ ಮಾಡಿಸಿಕೊಂಡು ನಕಾರಾತ್ಮಕ ಫಲಿತಾಂಶದ ಪುರಾವೆ ಹೊಂದಿರಬೇಕು ಎಂದು ಅಮೆರಿಕ ಆದೇಶ ಹೊರಡಿಸಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ