‘ಕೋವಿಡ್ ನಿಯಂತ್ರಣ’ ಮಾರ್ಗಸೂಚಿ ಆದೇಶ ಕೊನೆ: ಆದ್ರೇ ಮಾಸ್ಕ್ ಕಡ್ಡಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಕೊರೋನಾ ನಿಯಂತ್ರಣಕ್ಕೆ ಹೇರಲಾಗಿದ್ದ ನಿರ್ಬಂಧಗಳನ್ನುಗೃಹ ವ್ಯವಹಾರಗಳ ಸಚಿವಾಲಯದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವುಬುಧವಾರ ರದ್ದುಗೊಳಿಸಿದೆ. ಆದರೆ ಮಾಸ್ಕ್ ಬಳಕೆ ಸೇರಿದಂತೆ ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಸಲಹೆಗಳು ಮುಂದುವರಿಯುತ್ತವೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
ಕೋವಿಡ್​ ತೀವ್ರತೆ ತಗ್ಗಿದ ಪರಿಣಾಮ ವಿಧಿಸಲಾಗಿದ್ದ ಎಲ್ಲಾ ಕೊರೊನಾ ನಿರ್ಬಂಧಗಳನ್ನು ಮಾರ್ಚ್​ 31 ರಿಂದ ತೆರವು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಲಸಿಕೆ ನೀಡಿಕೆ ಬಳಿಕ ನಾಗರಿಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಹೀಗಾಗಿ ಎಲ್ಲ ಕೊರೊನಾ ನಿಯಮಗಳನ್ನು ಮಾರ್ಚ್​ 31 ರಿಂದ ತೆರವು ಮಾಡಲು ಸರ್ಕಾರ ಮುಂದಾಗಿದೆ. ಆದಾಗ್ಯೂ ಜನರು ಮಾಸ್ಕ್​​ ಧರಿಸುವುದನ್ನು ಬಿಡುವಂತಿಲ್ಲ ಎಂದು ತಿಳಿಸಿದೆ.
ಫೇಸ್ ಮಾಸ್ಕ್ ಬಳಕೆ ಮತ್ತು ಕೈ ನೈರ್ಮಲ್ಯ ಸೇರಿದಂತೆ ಸಾಂಕ್ರಾಮಿಕ ರೋಗಕ್ಕೆ ಒಟ್ಟಾರೆ ರಾಷ್ಟ್ರೀಯ ಪ್ರತಿಕ್ರಿಯೆಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!