ಸಾವಿರದ ಗಡಿ ದಾಟಿದ ಕೋವಿಡ್: ಕಳೆದ 24 ತಾಸಿನಲ್ಲಿ 335 ಹೊಸ ಕೇಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ಕೋವಿಡ್‌ನ ಸ್ಪೀಡ್ ಸ್ಪ್ರೆಡ್ಡರ್ ಉಪತಳಿ ಜೆಎನ್. 1 ಪತ್ತೆಯಾಗಿರುವ ಬೆನ್ನಿಗೇ ದೇಶದಲ್ಲಿ ಕೂಡಾ ಕೋವಿಡ್ ಪ್ರಕರಣಗಳು ನಿಧಾನವಾಗಿ ಹೆಚ್ಚಳವಾಗುತ್ತಿದೆ.

ದೇಶದಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ 335 ಕೋವಿಡ್ ಹೊಸ ಪ್ರಕರಣ ದಾಖಲಾಗಿವೆ. ಒಟ್ಟು ಐದು ಸಾವುಗಳು ಸಂಭವಿಸಿದೆ. ಈ ಪೈಕಿ ನಾಲ್ಕು ಸಾವುಗಳು ಕೇರಳದಲ್ಲಿ ಹಾಗೂ ಒಂದು ಸಾವು ಉತ್ತರ ಪ್ರದೇಶದಲ್ಲಿ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಈಗ ಆಕ್ಟೀವ್ ಪ್ರಕರಣಗಳ ಸಂಖ್ಯೆ 1701 ಗಡಿ ದಾಟಿದೆ. ಈ ಪೈಕಿ 1324 ಪ್ರಕರಣಗಳು ಕೇರಳದ್ದೇ ಆಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!