ಚೀನಾದಲ್ಲಿ ಹೆಚ್ಚುತ್ತಿದೆ ಕೋವಿಡ್ ಸಾವು: ಶವಾಗಾರಗಳಲ್ಲಿ ದಿನಗಟ್ಟಲೇ ಕ್ಯೂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೋವಿಡ್‌ ಜನಕ ಚೀನಾದಲ್ಲಿ ಕೋವಿಡ್‌ ಪ್ರಕರಣಗಳು ಉಲ್ಬಣವಾಗುತ್ತಿರುವುದರ ಬೆನ್ನಲ್ಲೇ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ಶವಾಗಾರಗಳಲ್ಲಿ ಶವಸಂಸ್ಕಾರ ಮಾಡಲೂ ದಿನಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಮೂಲಗಳು ವರದಿ ಮಾಡಿವೆ. ಆರ್ಥಿಕ ಸಂಕಷ್ಟದಿಂದ ಚೀನಾ ಕೋವಿಡ್‌ ನಿರ್ಬಂಧಗಳನ್ನು ತೆಗೆದಿರುವುದರಿಂದ ಕೋವಿಡ್‌ ಹೆಚ್ಚಾಗುತ್ತಿದೆ. ಬೀಜಿಂಗ್‌ನಲ್ಲಿ ಕೋವಿಡ್‌ನಿಂದ ಸಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನಲಾಗಿದೆ.

ಶವಾಗಾರಗಳಲ್ಲಿ ಶವಸಂಸ್ಕಾರ ಮಾಡಲಾಗದೇ ಪರದಾಡುವ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ಚಿತಾಗಾರದ ಸಿಬ್ಬಂದಿಗಳಲ್ಲಿಯೂ ಸಾಕಷ್ಟು ಜನರಿಗೆ ಕೋವಿಡ್‌ ಕಂಡುಬಂದಿರುವುದರಿಂದ ಶವ ಸುಡಲೂ ಸಿಬ್ಬಂದಿ ಕೊರತೆ ಎದುರಾಗಿದೆ. ಇದ್ದ ಸಿಬ್ಬಂದಿಯೇ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಕೆಲವು ಕಡೆ 3 ದಿನಗಳ ಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಕೆಲ ಕಡೆ ಸಾಮಾನ್ಯವಾಗಿ ದಿನಕ್ಕೆ 10-12 ಶವಗಳ ಸಂಸ್ಕಾರ ಮಾಡಲಾಗುತ್ತಿತ್ತು. ಆದರೆ ಈಗ ನಿತ್ಯ ಸುಮಾರು 150 ಶವಗಳು ಬರುತ್ತಿವೆ ಎನ್ನಲಾಗಿದೆ.

ಆದರೆ ಚೀನಾವು ಡಿಸೆಂಬರ್ 4 ರಿಂದ ಕೋವಿಡ್‌ ಸಾವನ್ನು ದಾಖಲಿಸಿಲ್ಲ. ಬೀಜಿಂಗ್‌ನಲ್ಲಿ ಕೊನೆಯ ಅಧಿಕೃತ ಕೋವಿಡ್ ಸಾವು ನವೆಂಬರ್ 2 ರಂದು ದಾಖಲಾಗಿದೆ. ಚೀನಾ ಕಳೆದ ವಾರದಿಂದ ಲಕ್ಷಣರಹಿತ ಪ್ರಕರಣಗಳ ವರದಿಯನ್ನೂ ನಿಲ್ಲಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!