ಕೋವಿಡ್‌ಗೆ ಬೆಂಗಳೂರು ಹೈರಾಣ: 10 ವಾರ್ಡ್‌ಗಳಲ್ಲಿ ಸೋಂಕು ತೀವ್ರ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮತ್ತೆ ಹೆಡೆಯೆತ್ತಿರುವ ಕೋವಿಡ್ ರಾಜಧಾನಿ ಬೆಂಗಳೂರನ್ನು ಹೈರಾಣಾಗಿಸುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ ಕಳೆದ ಒಂದು ವಾರದಲ್ಲಿ ಸೋಂಕು ತೀವ್ರಗತಿ ಪಡೆದುಕೊಂಡಿರುವುದಕ್ಕೆ ಅಂಕಿಅಂಶಗಳು ಸಾಕ್ಷಿ ನೀಡುತ್ತಿವೆ. ಈ ಪೈಕಿ ಬೆಳ್ಳಂದೂರು, ಕಾಡುಗೋಡಿ ವಾರ್ಡ್ ಸಹಿತ 10 ವಾರ್ಡ್‌ಗಳ ನಿವಾಸಿಗಳಲ್ಲಿ ಹೆಚ್ಚು ಸೋಂಕಿತರಿರುವುದು ಬಿಬಿಎಂಪಿ ಕೋವಿಡ್ ಹೆಲ್ತ್ ಬುಲೆಟಿನ್ ಕೂಡಾ ದೃಢಪಡಿಸುತ್ತಿವೆ.

ಕಳೆದ ಏಳು ದಿನಗಳಲ್ಲಿ ಬೆಳ್ಳಂದೂರಿನಲ್ಲಿ 69, ದೊಡ್ಡಾನೆಕ್ಕುಂದಿಯಲ್ಲಿ 34, ಕಾಡುಗೋಡಿ ವಾರ್ಡ್‌ನಲ್ಲಿ 32, ವರ್ತೂರಿನಲ್ಲಿ 24, ಹಗದೂರಿನಲ್ಲಿ 18 ಮಂದಿ ಕೋವಿಡ್‌ಗೆ ತುತ್ತಾಗಿದ್ದಾರೆ. ಇದಲ್ಲದೆ ಎಚ್‌ಎಸ್‌ಆರ್ ಬಡಾವಣೆಯಲ್ಲಿ 15, ಹೊರಮಾವು, ಹೂಡಿಯಲ್ಲಿ ತಲಾ 14, ಬೇಗೂರು 10 ಹಾಗೂ ವಿಜ್ಞಾನ ನಗರದಲ್ಲಿ 9 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಬೆಂಗಳೂರಿನಲ್ಲಿ ನಿತ್ಯ 15 ಸಾವಿರಕ್ಕೂ ಅಧಿಕ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಇದರ ನಡುವೆಯೂ ಕಳೆದ ಏಳು ದಿನಗಳಲ್ಲಿ ಗುಣಮುಖವಾದವರಿಗಿಂತ ಸೋಂಕಿಗೆ ತುತ್ತಾದವರ ಸಂಖ್ಯೆಯೇ ಹೆಚ್ಚಾಗಿರುವುದು ಆತಂಕಹುಟ್ಟಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!