ಏಷ್ಯ-ಯುರೋಪ್’ಗಳ ಕೆಲರಾಷ್ಟ್ರಗಳಲ್ಲಿ ಮತ್ತೆ ಶುರುವಾಗಿದೆ ಕೋವಿಡ್ ಅಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಕೋವಿಡ್ ಸಾಂಕ್ರಾಮಿಕ ಮುಗಿಯದ ಕತೆಯಾಗಿ ಮುಂದುವರಿದಿದೆ.

ಏಷ್ಯದ ರಾಷ್ಟ್ರಗಳಾದ ದಕ್ಷಿಣ ಕೊರಿಯಾ, ಹಾಂಕಾಂಗ್, ಚೀನಾ ಹಾಗೂ ಯುರೋಪಿನ ದೇಶಗಳಾದ ಜರ್ಮನಿ, ಆಸ್ಟ್ರಿಯಾ, ಸ್ವಿಡ್ಜರ್ಲೆಂಡ್, ಇಂಗ್ಲೆಂಡ್ ಇಲ್ಲೆಲ್ಲ ಕೋವಿಡ್ ಪ್ರಕರಣಗಳು ಏರಿಕೆ ಕಂಡಿವೆ.

ಲಸಿಕೆ ಪಡೆದೂ ಕೋವಿಡ್ ಏರಿಕೆ ಕಾಣುತ್ತಿರುವ ದಕ್ಷಿಣ ಕೊರಿಯಾ

ದಕ್ಷಿಣ ಕೊರಿಯಾದಲ್ಲಿ ವಯಸ್ಕರೆಲ್ಲ ಲಸಿಕೆ ಪಡೆದು ಶೇ. 100ರ ಲಸಿಕೀಕರಣ ಗುರಿ ಸಾಧಿಸಿದ್ದಾಗಿದೆ. ಅಲ್ಲಿನ ಸರ್ಕಾರ ಈಗ ನಾಲ್ಕನೇ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಕೊಡುವ ಚಿಂತನೆಯಲ್ಲಿದೆ. ಹೀಗಿದ್ದಾಗಲೂ ವಾರದಿಂದೀಚೆಗೆ ಸುಮಾರು 6 ಲಕ್ಷ ಕೋವಿಡ್ ಪ್ರಕರಣಗಳು ಈ ದೇಶದಿಂದ ವರದಿಯಾಗಿವೆ. ಈ ಒಂದು ವಾರದಲ್ಲಿ ದಿನಕ್ಕೆ ಸರಾಸರಿ 230 ಸಾವುಗಳು ಸಹ ದಕ್ಷಿಣ ಕೊರಿಯಾದಿಂದ ವರದಿಯಾಗಿವೆ.

ಹಾಕಾಂಗಿನಲ್ಲಿ 50,000 ಪ್ರಕರಣಗಳು ವರದಿಯಾದ ನಂತರ ಈಗ ಇಳಿಮುಖ ಕಾಣುತ್ತಿದ್ದರೆ, ಜೀರೊ ಕೋವಿಡ್ ಎಂಬ ಅತಿ ನಿಗಾದಲ್ಲಿರುವ ಚೀನಾದಲ್ಲೂ ಮೂರು ಸಾವಿರ ಹೊಸ ಪ್ರಕರಣಗಳು ವರದಿಯಾಗಿವೆ.

ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳುತ್ತಿದೆ?

ಒಮಿಕ್ರಾನಿನಲ್ಲೇ ಬಿಎ.2 ಎಂಬ ವಿಧ ಇದಾಗಿದ್ದು ಈ ಮೊದಲಿನ ಒಮಿಕ್ರಾನ್ ಗಿಂತಲೂ ಇದರ ಹಬ್ಬುವಿಕೆ ವೇಗ ಹೆಚ್ಚು. ಆದರೆ ರೋಗ ತೀವ್ರತೆ ಹಿಂದಿಗಿಂತ ಹೆಚ್ಚು ಎಂದೇನೂ ಸದ್ಯಕ್ಕೆ ಕಂಡುಬಂದಿಲ್ಲ. ಇದು ಪ್ರಾರಂಭವಷ್ಟೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆ ಕಡೆಯಿಂದ ಬಂದಿರುವ ವಿವರಣೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!