ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಹದಿಹರೆಯದವರ ಹೃದಯಾಘಾತಕ್ಕೂ ಕೊರೋನಾ ಲಸಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯಸಭೆಗೆ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಕೊರೋನಾ ಸಾಂಕ್ರಾಮಿಕ ರೋಗದ ನಂತರ 18ರಿಂದ 45 ವರ್ಷ ವಯೋಮಾನದ ಜನರಲ್ಲಿ ಕಂಡು ಬಂದಿದ್ದ ಹೃದಯಾಘಾತ ಕುರಿತು ಭಾರತೀಯ ವೈದ್ಯಕೀಯ ವಿಜ್ಞಾನ ಸಂಶೋಧನಾ ಮಂಡಳಿ ದೇಶದ 66 ಆಸ್ಪತ್ರೆಗಳಲ್ಲಿ ಅಧ್ಯಯನ ನಡೆಸಿದೆ. ಅಧ್ಯಯನದಲ್ಲಿ ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ಯುವಜನರಲ್ಲಿ ಹಠಾತ್ ಸಾವಿನ ಅಪಾಯವನ್ನು ಕೋವಿಡ್ -19 ಲಸಿಕೆ ಹೆಚ್ಚಿಸುವುದಿಲ್ಲ ಬದಲಿಗೆ ಅಪಾಯ ಕಡಿಮೆ ಮಾಡುತ್ತದೆ ಎಂದು ICMR ಅಧ್ಯಯನವು ನಿರ್ಣಾಯಕವಾಗಿ ಸಾಬೀತುಪಡಿಸುತ್ತದೆ ಎಂದು ನಡ್ಡಾ ತಿಳಿಸಿದ್ದಾರೆ.