ದೇಶಕ್ಕೆ ಕೋವಿಡ್​ನ​ ಹೊಸ ತಳಿ XE ಎಂಟ್ರಿ ಬೆನ್ನೆಲ್ಲೇ ಸ್ಫೋಟಕ ಮಾಹಿತಿ ನೀಡಿದ ಎನ್​.ಕೆ.ಆರೋರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ಕೋವಿಡ್​ನ​ ಹೊಸ ತಳಿ ಎಕ್ಸ್​​ಇ ಪತ್ತೆಯಾದ ಬೆನ್ನಲ್ಲೆ ಜನರಲ್ಲಿ ಮತ್ತೆ ಆತಂಕ ಮನೆಮಾಡಿದ್ದು, ಈ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಎಜಿಐ) ಮುಖ್ಯಸ್ಥ ಎನ್​.ಕೆ.ಆರೋರಾ ತಿಳಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಗುಜರಾತ್​ನಲ್ಲಿ ಕೋವಿಡ್​ನ​ ಹೊಸ ತಳಿ ಎಕ್ಸ್​​ಇ ಪತ್ತೆಯಾದ ಬೆನ್ನಲ್ಲೆ ಪ್ರತಿಕ್ರಿಯಿಸಿದ ಅವರು, ಒಮಿಕ್ರಾನ್​ನ ಹೊಸ ತಳಿ ಬರುತ್ತಲೇ ಇರುತ್ತವೆ. ಇತ್ತೀಚೆಗೆ ಪತ್ತೆಯಾದ ಎಕ್ಸ್​​ಇ ಎಕ್ಸ್​​ ಸರಣಿಯ ರೂಪಾಂತರಿಯಾಗಿದೆ. ಇಂತಹ ತಳಿಗಳು ಹುಟ್ಟುತ್ತಿರುತ್ತವೆ. ಜನರು ಆತಂಕಪಡುವ ಅಗತ್ಯ ಇಲ್ಲ ಎಂದರು.
ಭಾರತದಲ್ಲಿ ಇದುವರೆಗೆ ದಾಖಲಾದ ಮಾಹಿತಿ ಪ್ರಕಾರ, ಈ ತಳಿ ಅಷ್ಟೊಂದು ವೇಗವಾಗಿ ಹರಡದು. ಎಕ್ಸ್​​ಇ ತಳಿಯು ಮೊದಲ ಹಂತದ ಪರೀಕ್ಷೆಯ ಭಾಗವಾಗಿದೆ. ಒಂದೇ ಪರೀಕ್ಷೆಯಿಂದ ಹೊಸ ತಳಿ ಬರುತ್ತದೆ ಎಂದು ಹೇಳುವುದು ಕಷ್ಟಸಾಧ್ಯ ಎಂದರು.
ಕಳೆದ ತಿಂಗಳು ಮುಂಬೈನಿಂದ ಗುಜರಾತ್​​ನ ವಡೋದರಾಗೆ ಪ್ರಯಾಣಿಸಿದ್ದ 67 ವರ್ಷದ ವ್ಯಕ್ತಿಯಲ್ಲಿ ಇತ್ತೀಚೆಗೆ ಎಕ್ಸ್​​ಇ ಸೋಂಕು ಪತ್ತೆಯಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!