ಇಬ್ಬರ ಪ್ರಾಣ ಕಾಪಾಡಿದ ವ್ಯಕ್ತಿಗೆ ಗೋವಿನ ಕೃತಜ್ಞತೆ: ನೆಟ್ಟಿಗರ ಮನಗೆದ್ದ ವಿಡಿಯೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೂಕ ಜೀವಿಗಳು ಮನುಷ್ಯರಿಗಿಂತ ಹೆಚ್ಚು ಭಾವನೆಗಳನ್ನು ಹೊಂದಿವೆ. ಮನುಷ್ಯರಿಂದ ತಮಗೆ ಸಣ್ಣ ಸಹಾಯ ದಕ್ಕಿದರೂ ಸಾಕು ಬಹಳ  ಕೃತಜ್ಞರಾಗಿರುತ್ತವೆ. ಹೆರಿಗೆಯ ಸಮಯದಲ್ಲಿ ತನಗೆ ಸಹಾಯ ಮಾಡಿದ ವ್ಯಕ್ತಿಯ ಮೇಲೆ ಹಸು ಎಷ್ಟು ಪ್ರೀತಿಯನ್ನು ತೋರಿಸಿದೆ ಎಂಬುದನ್ನು ನೋಡಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ.

ಹಸು ಈಗಷ್ಟೇ ಪುಟ್ಟ ಕರುವಿಗೆ ಜನ್ಮ ನೀಡಿದೆ. ಹೆರಿಗೆ ನೋವಿನಲ್ಲಿದ್ದ ಹಸುವಿಗೆ ಸಹಾಯ ಮಾಡಿದ ವ್ಯಕ್ತಿಗೆ ಕೃತಜ್ಞತೆಗಾಗಿ, ಹಸು ಅವನ ಕೈ ಮತ್ತು ಹಣೆಯನ್ನು ನೆಕ್ಕುವ ಮೂಲಕ ತನ್ನ ಪ್ರೀತಿಯನ್ನು ತೋರಿಸಿತು. ಕರುವನ್ನು ಬಟ್ಟೆಯಿಂದ ಶುಚಿಗೊಳಿಸುತ್ತಿದ್ದಾಗ ಅವನ ಕೈಗಳು ನನ್ನನ್ನು ಸ್ಪರ್ಶಿಸಿ ಪ್ರೀತಿ ಮತ್ತು ಕೃತಜ್ಞತೆಯನ್ನು ತೋರಿಸಿದೆ. ಈ ಮುದ್ದಾದ ವಿಡಿಯೋ ಎಲ್ಲರ ಮನ ಮುಟ್ಟಿದೆ.

ಈ ವೀಡಿಯೋ ನೋಡಿದ ನೆಟ್ಟಿಗರು ಇದೊಂದು ಸುಂದರ ಸಂಬಂಧ ಎಂದು ಕಮೆಂಟ್ ಮಾಡಿದ್ದಾರೆ.ಈ ವಿಡಿಯೋ ನೋಡಿದ ಮೇಲೆ ಗೋವಿನ ಮೇಲಿನ ಪ್ರೀತಿ ಹೆಚ್ಚಿದೆ. ಮನುಷ್ಯರು ಕೆಲವೊಮ್ಮೆ ಮಾಡಿದ ಸಹಾಯವನ್ನು ಮರೆತುಬಿಡುತ್ತಾರೆ, ಆದರೆ ಮೂಕ ಪ್ರಾಣಿಗಳು ಮನುಷ್ಯರು ಮಾಡಿದ ಸಹಾಯವನ್ನು ಮರೆಯುವುದಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!