ಹೊಸದಿಗಂತ ವರದಿ ಕುಮಟಾ:
ತಾಲೂಕಿನ ಬಗ್ಗೋಣದಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ಗೋವನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿರುವ ಆರೋಪಿಗಳಲ್ಲಿ ಓರ್ವನನ್ನು ಕುಮಟಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರಿನ ಬೈಕಂಪಾಡಿ ನಿವಾಸಿ ಮಹಮ್ಮದ ಶಕೀರ್ ಸಮೀರ್ ಬಂಧಿತ ಆರೋಪಿಯಾಗಿದ್ದು ಗೋವು ಕಳ್ಳತನಕೆ ಬಳಸಿದ್ದ ಮಾರುತಿ ಎರ್ಟಿಕಾ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣದಲ್ಲಿ ಮಹಮ್ಮದ ಅಜೀಮ ಸಾಬ್ ಮತ್ತು ಜುಲ್ಪಾನ್ ಮಲಿಕ್ ಎಂಬ ಮತ್ತಿಬರು ಸಹ ಭಾಗಿಯಾಗಿದ್ದು ಅವರು ತಲೆಮರೆಸಿಕೊಂಡಿದ್ದಾರೆ. ಆರೋಪಿತರು ಬಗ್ಗೋಣದ ರೈಸ್ ಮಿಲ್ ಬಳಿ ಮಲಗಿದ್ದ ಹಸುಗಳಲ್ಲಿ ಒಂದು ಹಸುವಿಗೆ ತಿಂಡಿ ನೀಡಿ ಅದನ್ನು ಕಾರಿನ ಡಿಕ್ಕಿಯಲ್ಲಿ ತುಂಬಿ ಹೋಗಿರುವ ಸಿಸಿ ಟಿ.ವಿ ದೃಶ್ಯಾವಳಿ ಲಭ್ಯವಾಗಿತ್ತು.
ಈ ಕುರಿತು ಪ್ರಕರಣ ದಾಖಲಿಸಿದ ಕುಮಟಾ ಪೊಲೀಸರು ಹಲವು ಸಿ.ಸಿ ಟಿ.ವಿ ದೃಶ್ಯಾವಳಿ ಪರಿಶೀಲನೆ ಮತ್ತು,ತಾಂತ್ರಿಕ ನೆರವಿನಿಂದ ಆರೋಪಿಯನ್ನು ಬಂಧಿಸಿದ್ದು ತಲೆಮರೆಸಿಕೊಂಡಿರುವ ಆರೋಪಿತರ ಶೋಧ ಕಾರ್ಯ ಮುಂದುವರಿದಿದೆ.



