October 11, 2026
Sunday, October 11, 2026
spot_img

37 ವರ್ಷಗಳ ಭೂ ವಿವಾದ: ಪ್ರಧಾನಿ ಮೋದಿಗೆ ಮನವಿ ಮಾಡಿದ ಕ್ಲಾಸ್ ಮೇಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

37 ವರ್ಷಗಳಿಂದ ಬಗೆಹರಿಯದೆ ಉಳಿದಿರುವ ಭೂವಿವಾದವೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸುವಂತೆ ಮೋದಿ ಅವರ ಬಾಲ್ಯದ ಶಾಲಾ ಸಹಪಾಠಿಯಾಗಿದ್ದ ಅಸ್ಗರಾಲಿ ವೋಹ್ರಾ ಮನವಿ ಮಾಡಿದ್ದಾರೆ.

ಸೆಪ್ಟೆಂಬರ್ 8ರಂದು ಪ್ರಧಾನಿಯನ್ನು ಭೇಟಿಯಾದ ಅವರು ಮುಂಬೈನ ಭಾಯಂದರ್ ಪೂರ್ವದಲ್ಲಿರುವ ಭೂಮಿಗೆ ಸಂಬಂಧಿಸಿದ ವಿವಾದವನ್ನು ಸಿಬಿಐ ತನಿಖೆ ನಡೆಸುವಂತೆ ಕೋರಿದ್ದಾರೆ. ಹಲವು ವರ್ಷಗಳಿಂದ ಸರ್ಕಾರಿ ಇಲಾಖೆ, ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರ ಮುಂದೆ ಸಮಸ್ಯೆಯನ್ನು ಹೇಳಿದ್ರು ಕೂಡ ಪರಿಹಾರ ಸಿಕ್ಕಿಲ್ಲ ಎಂದು ವೋಹ್ರಾ ತಿಳಿಸಿದ್ದಾರೆ.

ಇದನ್ನೂ ಓದಿ:

ವೋಹ್ರಾ ಆರೋಪ ಏನು?

ಭಾಯಂದರ್ ಪೂರ್ವದ ನವಘರ್ ಪ್ರದೇಶದಲ್ಲಿರುವ ಸುಮಾರು 2,810 ಚದರ ಮೀಟರ್ ಭೂಮಿಯನ್ನು 1989ರಲ್ಲಿ ನೋಂದಾಯಿತ ಒಪ್ಪಂದದ ಮೂಲಕ ಮಾಡಿದ್ದೆವು, ಆದ್ರೆ 2011ರಲ್ಲಿ ಈ ಜಮೀನಿಗೆ ಅತಿಕ್ರಮಣವಾಗಿ ಪ್ರವೇಶಮಾಡಿದ್ದಾರೆ ಎಂದು ವೋಹ್ರಾ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಭೂಮಿಗೆ ಸಂಬಂಧಿಸಿರೋ ದಾಖಲೆಗಳನ್ನು ನಕಲಿ ಮಾಡಲಾಗಿದೆ ಹಾಗೂ ಮೂಲ ಮಾಲೀಕರಿಗೆ ಮಾಹಿತಿ ಇಲ್ಲದೆ ಆಸ್ತಿಗೆ ಸಂಬಂಧಿಸಿದ ಬೆಳವಣಿಗೆಗಳನ್ನು ನಡೆಸಲಾಗಿದೆ ಎಂದಿದ್ದಾರೆ.

ಪ್ರಧಾನಿ ಬಳಿ ಈ ಮಾಹಿತಿ ಹಂಚಿಕೊಂಡ ಬಳಿಕ ಪ್ರಕರಣ ಮತ್ತೆ ಗಮನ ಸೆಳೆದಿದ್ದು, ಸೆಪ್ಟೆಂಬರ್ 16ರಂದು ವಿಚಾರಣೆ ನಿಗದಿಯಾಗಿದ್ದು, ಈ ಸಲವಾದ್ರೂ ಭೂವಿವಾದಕ್ಕೆ ಪರಿಹಾರ ದೊರಕಬಹುದು ಅನ್ನೋ ಆಸೆಯನ್ನ ವೋಹ್ರಾ ವ್ಯಕ್ತಪಡಿಸಿದ್ದಾರೆ.

Must Read