ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜಪೇಟೆಯಲ್ಲಿ ಹಸು ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಿಯೋಗವು ಹಸು ಮಾಲೀಕರ ಮನೆಗೆ ಭೇಟಿ ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಪಿ.ಸಿ.ಮೋಹನ್, ಭಾಸ್ಕರ್ ರಾವ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಗೋಪೂಜೆ ನೆರವೇರಿಸಿ ಗೋವಿಗೆ ಬಾಳೆಹಣ್ಣು, ಬೆಲ್ಲ ನೀಡಿದ್ದಾರೆ. ಜೊತೆಗೆ ಆರ್.ಅಶೋಕ್ 100000 ಪರಿಹಾರ ನೀಡಿದ್ದಾರೆ.
ವಿಜಯೇಂದ್ರ ಮಾತನಾಡಿ, ನಾಡಿನ ಜನತೆಗೆ ಸಂಕ್ರಾಂತಿ ಶುಭಾಶಯ ಕೋರುತ್ತೇನೆ. ಮೊನ್ನೆ ದಿನ ಹಸು ಕೆಚ್ಚಲು ಕೊಯ್ದ ದುರ್ಘಟನೆ ನಡೆದಿತ್ತು. ಯಾವ ಪುಣ್ಯಭೂಮಿ ಮೇಲೆ ನಾವೆಲ್ಲ ಗೋ ಮಾತೆ ಪೂಜೆ ಮಾಡ್ತೀವಿ. ತಾಯಿ, ದೇವರ ಸಮಾನವಾಗಿ ಕಾಣ್ತೀವಿ. ಅಂತಹ ಗೋವಿಗೆ ಏನಾಗಿದೆ ಎಂದು ರಾಜ್ಯ, ದೇಶದ ಜನ ಗಮನಿಸಿದ್ದಾರೆ. ಇವತ್ತು ಹಸು ಮಾಲೀಕ ಕರ್ಣನಿಗೆ ಧೈರ್ಯ ಹೇಳಿದ್ದೇವೆ ಎಂದು ಹೇಳಿದ್ದಾರೆ.