I.N.D.I.A ಕೂಟಕ್ಕೆ ಶಾಕ್ ಕೊಟ್ಟ CPI: ವಯನಾಡಿನಲ್ಲಿ ಅಭ್ಯರ್ಥಿ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ವಯನಾಡಿನಲ್ಲಿ ಮತ್ತೆ ಈ ಬಾರಿ ಚುನಾವಣೆಯಲ್ಲಿ ಕಣಕ್ಕಿಳಿಯುವ ಚಿಂತನೆ ನಡೆಸುತ್ತಿದ್ದ ಸಂಸದ ರಾಹುಲ್‌ ಗಾಂಧಿಗೆ (Rahul Gandhi) ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI) ಶಾಕ್‌ ನೀಡಿದೆ.

ಕೇರಳದಲ್ಲಿ (Kerala) ಲೋಕಸಭೆ ಚುನಾವಣೆಗೆ (Lok Sabha Election) ನಾಲ್ಕು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿಪಿಐ ಸೋಮವಾರ ಬಿಡುಗಡೆ ಮಾಡಿದೆ. ರಾಷ್ಟ್ರೀಯ ಮಟ್ಟದಲ್ಲಿ INDIA ಮೈತ್ರಿಕೂಟದ ಭಾಗವಾಗಿರುವ ಸಿಪಿಐ ತಿರುವನಂತಪುರಂನಿಂದ ಪನ್ನಿಯನ್ ರವೀಂದ್ರನ್ ಮತ್ತು ವಯನಾಡಿನಿಂದ ಅನ್ನಿ ರಾಜಾ ಅವರನ್ನು ಕಣಕ್ಕಿಳಿಸಿದೆ. ವಿಎಸ್ ಸುನೀಲ್ ಕುಮಾರ್ ತ್ರಿಶೂರ್ ಮತ್ತು ಅರುಣ್ ಕುಮಾರ್ ಮಾವೇಲಿಕರದಿಂದ ಸ್ಪರ್ಧಿಸಲಿದ್ದಾರೆ.

ಕಾಂಗ್ರೆಸ್‌ನ (Congress) ಶಶಿ ತರೂರ್ ಅವರು ತಿರುವನಂತಪುರಂನ ಹಾಲಿ ಸಂಸದರಾಗಿದ್ದು, ರಾಹುಲ್ ಗಾಂಧಿ ವಯನಾಡ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ರಾಹುಲ್‌ ಗಾಂಧಿ ಮತ್ತೆ ವಯನಾಡಿನಿಂದ ಸ್ಪರ್ಧಿಸಿದರೆ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ (Annie Raja)ಅವರ ಪತ್ನಿ ಅನ್ನಿ ರಾಜಾ ಅವರನ್ನು ಎದುರಿಸಬೇಕು.

2019 ರ ಚುನಾವಣೆಯಲ್ಲಿ ಸಿಪಿಐ 4 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಯಾವುದೇ ಕ್ಷೇತ್ರವನ್ನು ಗೆದ್ದಿರಲಿಲ್ಲ. ಕೇರಳದಲ್ಲಿ ಒಟ್ಟು 20 ಲೋಕಸಭಾ ಸ್ಥಾನಗಳಿವೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ಗೆ 2, ಸಿಪಿಐ (ಎಂ), ಕೆಸಿ (ಎಂ), ಮತ್ತು ಆರ್‌ಎಸ್‌ಪಿ ತಲಾ 1 ಸ್ಥಾನಗಳನ್ನು ಗೆದ್ದಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!