ರಸ್ತೆಯಲ್ಲಿ ಬಿರುಕು: ಶಿರಾಡಿ, ಆಗುಂಬೆ, ಕೊಡಗು ಬಳಿಕ ಈಗ ಚಾರ್ಮಾಡಿಯ ಸರದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುರಿಯುತ್ತಿರುವ ಧಾರಾಕಾರ ಮಳೆ ಕರಾವಳಿಯನ್ನು ಸಂಪರ್ಕಿಸುವ ಘಾಟ್ ರಸ್ತೆಗಳ ಮೇಲೆ ಅಕ್ಷರಶಃ ಪ್ರಹಾರ ನೀಡುತ್ತಿದ್ದು ಶಿರಾಡಿ, ಆಗುಂಬೆ, ಕೊಡಗು ಬಳಿಕ ಈಗ ಚಾರ್ಮಾಡಿ ಅಪಾಯದ ಸೂಚನೆ ನೀಡಿದೆ.
ರಾಷ್ಟ್ರೀಯ ಹೆದ್ದಾರಿ ೭೩ರಲ್ಲಿ ಬರುವ ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನ ರಸ್ತೆಯ ಮೋರಿಯೊಂದು ಸೋಮವಾರ ಬಿರುಕು ಬಿಟ್ಟಿದ್ದು, ಮುನ್ನಚ್ಚರಿಕಾ ಕ್ರಮವಾಗಿ ಇಲ್ಲಿ ಬ್ಯಾರಿಕೆಡ್ ಅಳವಡಿಸಿ ಮರಳು ಮಿಶ್ರಿತ ಕಲ್ಲುಗಳನ್ನು ಹಾಕಲಾಗಿದೆ. ಸಧ್ಯ ಸಂಚಾರಕ್ಕೆ ಸಮಸ್ಯೆ ಇಲ್ಲವಾದರೂ ಕುಸಿತ ಗೊಂಡಿರುವ ಇನ್ನೊಂದು ಭಾಗದಲ್ಲಿ ಕಂದಕ ಇರುವ ಕಾರಣ ಚಾಲಕರು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!