LIP CARE | ತುಟಿಗಳು ಒಡೆದು ರಕ್ತ ಬರುತ್ತಿದೆಯೇ? ಮೃದುವಾದ ತುಟಿಗಳಿಗಾಗಿ ಹೀಗೆ ಮಾಡಿ..

ಚಳಿಗಾಲದಲ್ಲಿ ತುಟಿಗಳಿಗೆ ಹೆಚ್ಚು ಆರೈಕೆ ಬೇಕಿದೆ. ಶೀತಗಾಳಿಯಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಹಾಗಾಗಿ ಮಾಮೂಲಿ ಸಮಯಕ್ಕಿಂತ ಸ್ವಲ್ಪ ಹೆಚ್ಚು ಕಾಳಜಿ ವಹಿಸುವುದು ಮುಖ್ಯವಾಗಿದೆ.

  • ತುಟಿಗಳನ್ನು ನಾಲಿಗೆಯಿಂದ ಆಗಾಗ ಒರೆಸುವುದು ಮಾಡಬೇಡಿ, ಮಾಡಿದಷ್ಟು ಅವು ಡ್ರೈ ಆಗುತ್ತವೆ.
  • ವಾರಕ್ಕೊಮ್ಮೆ ಲಿಪ್ ಸ್ಕ್ರಬ್ ಬಳಸಿ ಬೇಡದ ಚರ್ಮವನ್ನು ತೆಗೆದುಹಾಕಿ.
  • ಲಿಪ್ ಸ್ಕ್ರಬ್ ಇಲ್ಲ ಎಂದಾದರೆ ಕಾಫಿಪುಡಿಗೆ ಸಕ್ಕರೆ ಹಾಕಿ ಸ್ಕ್ರಬ್ ಮಾಡಿ.
  • ಯಾವಾಗಲೂ ಲಿಪ್ ಬಾಮ್ ಇರಲಿ, ಇವು ತುಟಿಯನ್ನು ಮಾಯಿಶ್ಚರೈಸ್ ಮಾಡುತ್ತವೆ.
  • ತುಟಿಗಳಿಗೂ ಸನ್‌ಸ್ಕ್ರೀನ್ ಹಚ್ಚುವುದನ್ನು ಮರೆಯಬೇಡಿ, ಸೂರ್ಯನ ಚೂಪಾದ ಕಿರಣಗಳಿಗೆ ಅವು ಹಾನಿಯಾಗುತ್ತವೆ.
  • ಒಣಗಿನ ಚರ್ಮವನ್ನು ಉಗುರಿನಿಂದ ಕೀಳಬೇಡಿ, ಇದು ರಕ್ತ ಬರುವಂತೆ ಮಾಡುತ್ತದೆ, ಹಾಗೂ ತುಟಿಯ ಬಣ್ಣ ಬದಲಾಗುತ್ತದೆ.
  • ಕೊಬ್ಬರಿ ಎಣ್ಣೆ, ಅಲೋವೆರಾ ಜೆಲ್ ತುಟಿಗೆ ಹಚ್ಚಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!