September 27, 2026
Sunday, September 27, 2026
spot_img

ಊಟದ ನಂತರ ಸಿಹಿ ತಿನ್ನುವ ಕ್ರೇವಿಂಗ್‌ ಆಗ್ತಿದ್ಯಾ? ಈ ಕಾಯಿ ಅವಲಕ್ಕಿ ತಿಂದು ನೋಡಿ

ಸಾಮಾಗ್ರಿಗಳು
ತೆಳು ಅವಲಕ್ಕಿ
ಬೆಲ್ಲ
ಕಾಯಿತುರಿ
ಏಲಕ್ಕಿ ಪುಡಿ
ಬಾಳೆಹಣ್ಣು

ಮಾಡುವ ವಿಧಾನ

ಮೊದಲು ಫ್ರೆಶ್‌ ತೆಂಗಿನಕಾಯಿ ಒಡೆದು ತುರಿದು ಇಟ್ಟುಕೊಳ್ಳಿ
ಆನಂತರ ಬೌಲ್‌ಗೆ ತೆಳು ಅವಲಕ್ಕಿ, ಬೆಲ್ಲ, ಏಲಕ್ಕಿ ಪುಡಿ ಹಾಗೂ ತುರಿದ ತೆಂಗಿನಕಾಯಿ ಹಾಕಿ
ಇದಕ್ಕೆ ಹೆಚ್ಚುವರಿ ನೀರು ಹಾಕಬೇಡಿ. ತೆಂಗಿನಕಾಯಿ ತುರಿಯ ಮಾಯಿಶ್ಚರ್‌ ಹಾಗೂ ಬೆಲ್ಲದ ಅಂಟಿನಿಂದ ಅವಲಕ್ಕಿ ಅತ್ಯುತ್ತಮ ಕನ್ಸಿಸ್ಟೆನ್ಸಿಗೆ ಬರುತ್ತದೆ
ನಂತರ ಬೇಕಿದ್ದರೆ ಬಾಳೆಹಣ್ಣು ಕತ್ತರಿಸಿ ಹಾಕಿಕೊಂಡು ತಿನ್ನಿ ಇಲ್ಲವಾದರೆ ಹಾಗೇ ತಿನ್ನಬಹುದು

Must Read