ಸಾಮಾಗ್ರಿಗಳು
ಹುಣಸೆಹಣ್ಣು
ಒಣ ಮೆಣಸಿನಕಾಯಿ
ಧನಿಯಾ
ಮೆಂತ್ಯ
ಎಳ್ಳು
ಒಣ ತೆಂಗಿನ ತುರಿ
ಕಡಲೆಬೇಳೆ
ಉದ್ದಿನಬೇಳೆ
ಬೆಲ್ಲ
ಉಪ್ಪು
ಅರಿಶಿನ
ಎಣ್ಣೆ
ಸಾಸಿವೆ
ಕಡಲೆಬೇಳೆ
ಉದ್ದಿನಬೇಳೆ
ಕಡಲೆಬೀಜ
ಒಣ ಮೆಣಸಿನಕಾಯಿ
ಕರಿಬೇವು
ಇಂಗು
ಬೇಯಿಸಿದ ಅನ್ನ
ಮಾಡುವ ವಿಧಾನ
ಮೊದಲು ಹುಣಸೆಹಣ್ಣನ್ನು ಸ್ವಲ್ಪ ಬಿಸಿ ನೀರಿನಲ್ಲಿ ನೆನೆಸಿ ಗಟ್ಟಿಯಾದ ಹುಣಸೆ ರಸ ತೆಗೆದುಕೊಳ್ಳಿ. ಹೆಚ್ಚು ನೀರು ಹಾಕಬೇಡಿ.ನಂತರ ಬಾಣಲೆಗೆ ಧನಿಯಾ, ಮೆಂತ್ಯ, ಎಳ್ಳು, ಕಡಲೆಬೇಳೆ, ಉದ್ದಿನಬೇಳೆ ಹಾಗೂ ಒಣ ಮೆಣಸಿನಕಾಯಿ ಹಾಕಿ ಡ್ರೈ ರೋಸ್ಟ್ ಮಾಡಿಕೊಳ್ಳಿ.
ಕೊನೆಯಲ್ಲಿ ಒಣ ತೆಂಗಿನ ತುರಿ ಸೇರಿಸಿ ಸ್ವಲ್ಪ ಹುರಿದು ತಣ್ಣಗಾಗಲು ಬಿಡಿ. ನಂತರ ಎಲ್ಲವನ್ನೂ ನುಣ್ಣಗೆ ಪುಡಿ ಮಾಡಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಕಡಲೆಬೀಜ ಹಾಕಿ ಕೆಂಪಗೆ ಹುರಿದು ಪಕ್ಕಕ್ಕಿಟ್ಟುಕೊಳ್ಳಿ. ಇದೇ ಎಣ್ಣೆಗೆ ಸಾಸಿವೆ ಸಿಡಿಸಿ. ಕಡಲೆಬೇಳೆ, ಉದ್ದಿನಬೇಳೆ, ಒಣ ಮೆಣಸಿನಕಾಯಿ ಹಾಗೂ ಕರಿಬೇವು ಹಾಕಿ ಹುರಿಯಿರಿ. ಇಂಗು ಸೇರಿಸಿ. ಇದಕ್ಕೆ ಹುಣಸೆ ರಸ, ಅರಿಶಿನ ಮತ್ತು ಉಪ್ಪು ಹಾಕಿ ಕುದಿಸಿ.
ಹುಣಸೆ ರಸದ ಹಸಿ ವಾಸನೆ ಹೋಗಿ ಮಿಶ್ರಣ ಸ್ವಲ್ಪ ಗಟ್ಟಿಯಾಗುವಾಗ ತಯಾರಿಸಿದ ಪುಳಿಯೋಗರೆ ಪುಡಿ ಹಾಗೂ ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ. ಎಣ್ಣೆ ಮೇಲಕ್ಕೆ ಬಂದು ಗೊಜ್ಜು ಗಟ್ಟಿಯಾದಾಗ ಒಲೆಯಿಂದ ಇಳಿಸಿ. ಇದನ್ನು ಸಂಪೂರ್ಣ ತಣ್ಣಗಾಗಲು ಬಿಡಿ. ಬೇಯಿಸಿ ತಣ್ಣಗಾದ ಅನ್ನಕ್ಕೆ ಸ್ವಲ್ಪ ಎಣ್ಣೆ ಹಾಕಿ, ಬೇಕಾದಷ್ಟು ಪುಳಿಯೋಗರೆ ಗೊಜ್ಜು ಹಾಗೂ ಕಡಲೆಬೀಜ ಕಲಸಿದರೆ ಮೇಲುಕೋಟೆ ಪುಳಿಯೊಗರೆ ರೆಡಿ



