September 26, 2026
Saturday, September 26, 2026
spot_img

ಐತಿಹಾಸಿಕ ಕ್ಷಣ: ಮೂರು ರಾಜ್ಯಗಳ ಸಿಎಂ ಹಸ್ತದಲ್ಲಿ ತುಂಗೆ ಅಣೆಕಟ್ಟಿನ ಕ್ರೆಸ್ಟ್ ಗೇಟ್ ಲೋಕಾರ್ಪಣೆ

ಹೊಸದಿಗಂತ ವರದಿ ವಿಜಯನಗರ:

ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್ ಗಳ ನೂತನ ಸ್ಪಿಲ್ ವೇಗಳನ್ನು ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳು ಜಂಟಿಯಾಗಿ ಗುರುವಾರ ಲೋಕಾರ್ಪಣೆ ಮಾಡಿದರು.

ಕರ್ನಾಟಕ ಸಿಎಂ ಡಿ.ಕೆ.ಶಿವಕುಮಾರ್, ಆಂಧ್ರಪ್ರದೇಶದ ಸಿಎಂ ಎನ್.‌ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ರೇವಂತ ರೆಡ್ಡಿ ಹಾಗೂ ಕೇಂದ್ರ ಜಲ ಶಕ್ತಿ ‌ಸಚಿವ ಸಿ.ಆರ್. ಪಾಟೀಲ್ ಅವರು ಗೇಟ್ ನಂ. 18, 19, 20, 21 ನೇ ಗೇಟ್‌ ಬಟನ್ ಒತ್ತುವ ಮೂಲಕ ಉದ್ಘಾಟಿಸುವ ಮೂಲಕ ಧನ್ಯತೆ ಮೆರೆದರು.

ಇದಕ್ಕೂ ಮುನ್ನ ಮುನಿರಾಬಾದ್ ನ ಐಆರ್‌ಬಿ ಪೊಲೀಸ್ ಮೈದಾನದಲ್ಲಿರುವ ಹೆಲಿಪ್ಯಾಡ್ ನಿಂದ ಮೂರು ರಾಜ್ಯಗಳ ಮುಖ್ಯಮಂತ್ರಿ ಗಳು ಒಂದೇ‌ಕಾರಿನಲ್ಲಿ ಟಿಬಿ ಡ್ಯಾಂ ಗೆ ಆಗಮಿಸುವ ಮೂಲಕ ಸ್ನೇಹಪರತೆಯನ್ನು ಮೆರೆದರು. ಈ‌ಸಂದರ್ಭದಲ್ಲಿ ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಶಿವರಾಜ್ ವಿ.ತಂಗಡಗಿ, ಎನ್.ಎಸ್.ಬೋಸರಾಜ್, ಸಂಸದರಾದ ಈ.ತುಕಾರಾಂ, ಡಾ‌.ಪ್ರಭಾ ಮಲ್ಲಿಕಾರ್ಜುನ, ರಾಜಶೇಖರ ಹಿಟ್ನಾಳ್, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಎಚ್‌.ಆರ್. ಗವಿಯಪ್ಪ, ಡಾ.ಎನ್.ಶ್ರೀನಿವಾಸ, ಹಂಪನಗೌಡ ಬಾದರ್ಲಿ ಮತ್ತಿತರರು ಇದ್ದರು.

Must Read