ಹೊಸದಿಗಂತ ವರದಿ, ಮುಂಡಗೋಡ:
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಕ್ರಿಕೆಟ್ ಬೆಟ್ಟಂಗ್ ನಡೆಸುತ್ತಿದ್ದ ವೇಳೆ ಪೊಲೀಸರ ದಾಳಿ ನಡೆಸಿದ್ದು ಒಬ್ಬ ಆರೋಪಿ ಸಿಕ್ಕಿ ಬಿದ್ದರೆ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಪಟ್ಟಣದ ಮಂಜುನಾಥ ಕೊರವರ ಸಿಕ್ಕಿಬಿದ್ದ ಆರೋಪಿಯಾಗಿದ್ದಾನೆ. ವೆಂಕಟೇಶ ಅರಿವಾಣ, ಗದಗಿನ ಮಂಜುನಾಥ, ಹರೀಶ ಬಾಳೆಮ್ಮನವರ ಆರೋಪಿಗಳಾಗಿದ್ದು ಪರಾರಿಯಾಗಿದ್ದರು. ಏ.೫ ರಂದು ರಾಜಸ್ಥಾನ ಮತ್ತು ಪಂಜಾಬ ತಂಡಗಳ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಮೇಲೆ ಹಣ ಕಟ್ಟಿ ರಸ್ತೆಯಲ್ಲಿ ಬರಹೋಗುವ ಜನರನ್ನು ಕರೆದು ಜನರನ್ನು ಸಂಪರ್ಕಿಸಿ ಬೆಟ್ಟಿಂಗ್ ನಡೆಸುತ್ತಿದ್ದರು. ಈ ವೇಳೆ ಪೊಳೀಸರು ದಾಳಿ ಮಾಡಿದ್ದಾರೆ. ಆರೋಪಿತರಿಂದ ೨೩೦೦. ರೂ ನಗದು ಹಣ, ಲಾವಾ ಕಂಪನಿಯ ಕೀಪ್ಯಾಡ್ ಮೊಬೈಲ್ ಮತ್ತು ಕ್ರಿಕೆಟ್ ಬೆಟ್ಟಿಂಗ್ ಬರೆದಿರುವ ನೋಟಬುಕ್ ಹಾಗೂ ಪೆನ್ನುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಮ್. ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಜಿ., ಜಗದೀಶ ನಾಯ್ಕ, ಡಿವೈಎಸ್ಪಿ ಗಣೇಶ ಕೆ. ಎಲ್, ಮಾರ್ಗದರ್ಶನದಲ್ಲಿ ಸಿಪಿಐ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಹಾಂತೇಶ ಮುಧೋಳ, ಅನ್ವರ ಬಮ್ಮಿಗಟ್ಟಿ, ನಾಗಪ್ಪ ಎಮ್ ಕಾರ್ಯಚರಣೆಯಲ್ಲಿದ್ದರು. ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಮ್. ನಾರಾಯಣ ಅವರು ಶ್ಲಾಘಿಸಿದ್ದು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.